Daily Horoscope

Select Your Language

Notifications

webdunia
webdunia
webdunia
webdunia

ದೇವಸ್ಥಾನದಲ್ಲಿ ಕೇಸರಿ ಧ್ವಜ ಹಾರಿಸಬಾರದು ಎಂದ ಹೇಳಿಕೆಗೆ ಸ್ಪಷ್ಟನೆ ಕೊಟ್ಟ ರಮಾನಾಥ ರೈ

Ramanatha Rai
Photo Credit: Instagram
ಉಡುಪಿ: ಪರ್ಯಾಯ ಉತ್ಸವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ಹಿಡಿದಿದ್ದಕ್ಕೆ ದೇವಸ್ಥಾನದಲ್ಲಿ ಕೇಸರಿ ಧ್ವ ಹಾರಿಸಬಾರದು ಎಂದು ಕಾಂಗ್ರೆಸ್ ನಾಯಕ ರಮಾನಾಥ ರೈ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ಈ ವಿವಾದಕ್ಕೆ ಈಗ ಅವರೇ ಸ್ಪಷ್ಟನೆ ನೀಡಿದ್ದಾರೆ.

ದೇವಸ್ಥಾನದಲ್ಲಿ ಕೇಸರಿ ಧ್ವಜ ಹಾಕಬಾರದು ಎಂದರೆ ಇನ್ನೆಲ್ಲಿ ಹಾಕಬೇಕು ಎಂದು ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

‘ಜಿಲ್ಲಾಧಿಕಾರಿಯಾಗಿದ್ದವರು ಕೇಸರಿ ಧ್ವಜವನ್ನು ಅಥವಾ ಇತರೆ ಯಾವುದೇ ಧ್ವಜವನ್ನು ಹಾಕಬಾರದು ಎಂದು ಹೇಳಿಕೆ ಕೊಟ್ಟಿದ್ದೇನೆ. ಆಧರೆ ಮಾಧ್ಯಮದಲ್ಲಿ ಅದು ದೇವಸ್ಥಾನದಲ್ಲಿ ಹಾಕಬಾರದು ಎಂದು ಹೇಳಿದ್ದಾಗಿ ಬಂದಿದೆ.

ನಾನು ಹೇಳಿರುವುದು ನಿರ್ದಿಷ್ಟ ವಿಷಯದ ಬಗ್ಗೆ ಮತ್ತು ಜಿಲ್ಲಾಧಿಕಾರಿಗಳು ಯಾವುದೇ ಧರ್ಮದ ಧ್ವಜ ಹಾಕಬಾರದು ಎಂದಿದ್ದೆ. ಆದರೆ ನಾನು ಹೇಳಿದ್ದನ್ನು ಅಪಪ್ರಚಾರ ಮಾಡಲಾಗಿದೆ. ನಾನು ಹೇಳಿರುವಹೇಳಿಕೆ ಜಿಲ್ಲಾಧಿಕಾರಿಯವರು ಧಾರ್ಮಿಕ ಧ್ವಜವನ್ನು ಹಾಕುವುದು ಸರಿಯಲ್ಲ ಎಂದಿರುವುದು. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ಸರ್ಕಾರೀ ನೌಕರರು ಒಂದು ಧರ್ಮಕ್ಕೆ ಸೀಮಿತವಾದ ಧ್ವಜ ಹಾರಿಸುವುದು ಸರಿಯಲ್ಲ ಎಂಬ ಅರ್ಥದಲ್ಲಿ ಹೇಳಿದ್ದೇನೆ ಎಂದು ವಿಡಿಯೋ ಸಂದೇಶ ಮೂಲಕ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಗಾ ನದಿಗೆ ಓರ್ವ ಹಾಲೆರೆಯುವಾಗ ಕಂಡುಬಂದ ದಯನೀಯ ದೃಶ್ಯವಿದು Video