Select Your Language

Notifications

webdunia
webdunia
webdunia
Monday, 7 April 2025
webdunia

ಬಸ್ ಗಳ ಸಂಚಾರದ ಬಗ್ಗೆ ಉತ್ತರಿಸದ ರಾಮಲಿಂಗಾರೆಡ್ಡಿ

Ramalingareddy
bangalore , ಸೋಮವಾರ, 25 ಸೆಪ್ಟಂಬರ್ 2023 (17:24 IST)
ಬಿಎಂಟಿಸಿ ರಜತ ಮಹೋತ್ಸವ ಕಾರ್ಯಕ್ರಮದ ಮುನ್ನ  ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು,ನಾಳೆಯ ಬಂದ್ ವಿಚಾರವಾಗಿ ಬಸ್ ಗಳ ಸಂಚಾರದ ಬಗ್ಗೆ  ರಾಮಲಿಂಗಾರೆಡ್ಡಿ ಉತ್ತರಿಸಿಲ್ಲ.ಕನ್ನಡ ಭಾಷೆ,ನೀರು ಹಾಗೂ ಗಡಿ ವಿಚಾರವಾಗಿ ಪ್ರತಿಭಟನೆ ಮಾಡ್ತಿದ್ದಾರೆ.ನಾಳೆ ಬಂದ್ ಇದೆ ಎನ್ನಲಾಗಿದೆ, ವಾಟಾಳ್ ನಾಗರಾಜ್ ಕೂಡ ಕರೆಕೊಟ್ಟಿದ್ದಾರೆ.ಎಲ್ಲರೂ ಸೇರಿ ಒಂದೇ ದಿನ ಮಾಡಿದ್ರೆ ಸರಿ ಇರುತ್ತಿತ್ತು.ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಬಂದ್ ಮಾಡಲಿ.ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ.ಯುನಿಯನ್‌ ಅವರ ಜೊತೆ ಮಾತುಕತೆ ಮಾಡ್ತೇನೆ.ಮಾತುಕತೆ ಬಳಿಕ ಬಸ್ ಗಳ ಸಂಚಾರದ ಬಗ್ಗೆ ನಿರ್ಧಾರ.ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿರೋದು ನಿಜ.ಅದ್ಕಾಗಿ ಹೋರಾಟ ನಡೆಯುತ್ತಿದೆ.ಈ ಹಿಂದೆಯೂ ನಮ್ಮ ಸಾರಿಗೆ ಸಿಬ್ಬಂದಿಗಳು ಬೆಂಬಲ ಕೊಟ್ಟಿದ್ದರು.ಈ ಬಾರಿಯೂ ಕೊಡತ್ತೇವೆ ಎಂದಿದ್ದಾರೆ.ಅವರ ಜೊತೆ ಇವತ್ತು ಸಂಜೆ ಸಭೆ ಮಾಡಿ ಅಂತಿ‌ಮ ತೀರ್ಮಾನ ತಿಳಿಸುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ರಾಜಧಾನಿ ಬೆಂಗಳೂರು ಸ್ತಬ್ಧ..!