Daily Horoscope

Select Your Language

Notifications

webdunia
webdunia
webdunia
webdunia

ರಾಮಲಿಂಗಾರೆಡ್ಡಿ ರಾಜೀನಾಮೆ: ಸಭೆ ಬಳಿಕ ಮಹತ್ವದ ವಿಚಾರ ಹಂಚಿಕೊಂಡ ರಣದೀಪ್‌ ಸುರ್ಜೇವಾಲ

Randeep Surjewala
Photo Courtesy X
ಬೆಂಗಳೂರು: ಈಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಮನವೊಲಿಸುವಲ್ಲಿ ಸಫಲರಾಗಿದ್ದೇವೆDಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. 

ಖಾಸಗಿ ಹೋಟೆಲ್‌ನಲ್ಲಿ ರಾಮಲಿಂಗಾರೆಡ್ಡಿ ಜೊತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲ, ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಸ್‌ ಪಡೆದಿದ್ದಾರೆ. ಸಚಿವ ಸಂಪುಟದಲ್ಲಿ ಮುಂದುವರಿದು ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆಂದು ಮಾಹಿತಿ ಹಂಚಿಕೊಂಡರು.

ಇವತ್ತು ನಿಮ್ಮ ಯಾವುದೇ ಪ್ರಶ್ನೆಗೆ ಉತ್ತರ ಕೊಡಲ್ಲ. ಬಿಜೆಪಿ ಸಾಕಷ್ಟು ಗೊಂದಲ ನಿರ್ಮಾಣ ಮಾಡಿದೆ. ಎನ್‌ಎಸ್‌ಯುಐನಿಂದಲೂ ಬಿ.ಕೆ.ಹರಿಪ್ರಸಾದ್ ಜೊತೆ ರಾಮಲಿಂಗಾರೆಡ್ಡಿ ಇದ್ದರು. ವಿದ್ಯಾರ್ಥಿ ಸಂಘಟನೆಯಿಂದಲೂ ಅವರ ಜೊತೆಗಿದ್ದಾರೆ. ರಾಮಲಿಂಗಾರೆಡ್ಡಿ ಅವರು 8 ಬಾರಿ ಶಾಸಕರಾಗಿದ್ದಾರೆ. ಪಕ್ಷಕ್ಕೆ ಅವರ ಅನುಭವ ಮೌಲ್ಯಯುತವಾದದ್ದು ಎಂದು ಹೇಳಿದರು. 

ನಾನು, ಸಿಎಂ ಡಿ.ಕೆ.ಶಿವಕುಮಾರ್,‌ ಮಾಜಿ ಸಿಎಂ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ನಾಲ್ಕು ಜನರೂ ಮಾತನಾಡಿದ್ವಿ.‌ ರಾಜೀನಾಮೆ ವಾಪಾಸ್ ಪಡೆಯಲು ಹೇಳಿದ್ದೆವು. ಅವರು ನಮ್ಮ ಜೊತೆ ಕೆಲಸ ನಿರಂತರವಾಗಿ ಮುಂದುವರಿಸಲಿದ್ದಾರೆ ಎಂದರು.

ರಾಮಲಿಂಗಾರೆಡ್ಡಿ ಅವರು ತಮ್ಮ ರಾಜೀನಾಮೆ ವಾಪಾಸ್ ಪಡೆದಿರುವುದರಿಂದ ನಮ್ಮ ಕ್ಯಾಬಿನೆಟ್‌ನಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯಾರಿಗೂ ರಾಜೀನಾಮೆ ನೀಡಲು ಅನುಮತಿ ಇಲ್ಲ: ಅಣ್ಣಾಮಲೈ ರಾಜೀನಾಮೆ ಬೆನ್ನಲ್ಲೇ ತಮಿಳು ಬಿಜೆಪಿ ಅಧ್ಯಕ್ಷ ಸಂದೇಶ