Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ಗೆ ರಾಮ- ರಹೀಂ ಎಲ್ಲರೂ ಒಂದೇ: ಸಚಿವ ಈಶ್ವರ ಖಂಡ್ರೆ

RamNagar Name

Sampriya

ಬೀದರ್ , ಬುಧವಾರ, 10 ಜುಲೈ 2024 (19:31 IST)
Photo Courtesy X
ಬೀದರ್: ಬಿಜೆಪಿ ಜಾತಿ ಜಾತಿಗಳಲ್ಲಿ ಒಡೆದಾಳುವ ಕೆಲಸ ಮಾಡುತ್ತಿದ್ದು, ನಮಗೆ  ರಾಮ- ರಹೀಮ್ ಎಲ್ಲರೂ ಒಂದೇ. ನಮಗೆ ಆ ರೀತಿಯ ಭಾವನೆ ಇಲ್ಲ ಎಂದು ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ರಾಮನಗರ ಜಿಲ್ಲೆ ಬದಲಾವಣೆ ತೀರ್ಮಾನವನ್ನು ಸಿಎಂ- ಡಿಸಿಎಂ ಮಾಡಲಿದ್ದಾರೆ. ರಾಮನಗರ ಹೆಸರಿನಲ್ಲಿ ರಾಮನ ಹೆಸರು ಇರುವುದಕ್ಕೆ ಬದಲಾವಣೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಸುಳ್ಳು. ನಮಗೆ ಆ ರೀತಿಯ ಭಾವನೆ ಇಲ್ಲ ಎಂದರು.  

ಇನ್ನೂ ವಾಲ್ಮೀಕಿ ನಿಗಮದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಸ್‌ಐಟಿ ತಂಡ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಸರ್ಕಾರ ಅಕ್ರಮ ಹಣ ವಸೂಲಿ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತದೆ. ನಿಷ್ಪಕ್ಷಪಾತವಾಗಿ ಅಕ್ರಮದ ತನಿಖೆಯನ್ನು ಎಸ್‌ಐಟಿ ತಂಡ ಮಾಡಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಮಹಿಳೆಯರ ವಿರುದ್ದ ಅವಹೇಳನಕಾರಿ ಹೇಳಿಕೆ: ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ವಿಚಾರಣೆಗೆ ಹೈಕೋರ್ಟ್ ತಡೆ