Publish Date: Tue, 22 May 2018 (14:04 IST)
Updated Date: Tue, 22 May 2018 (14:06 IST)
ಬೆಂಗಳೂರು : ಮೇ 12 ರಂದು ನಡೆಯಬೇಕಾಗಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಅಕ್ರಮವಾಗಿ ವೋಟರ್ ಐಡಿಗಳು ಪತ್ತೆಯಾದ ಹಿನ್ನಲೆಯಲ್ಲಿ ಮುಂದೂಡಲಾಗಿದ್ದು, ಇದೀಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿ ಮಹಶ್ವರ್ ರಾವ್ ಹಾಗೂ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ. 28 ಕ್ಕೆ ನಡೆಯಲಿದ್ದು, ಮೇ. 31 ಕ್ಕೆ ಎಣಿಕೆ ಕಾರ್ಯ ನಡೆಯಲಿದೆ ಎಂಬುದಾಗಿ ತಿಳಿಸಿದ್ದಾರೆ. ಒಟ್ಟು 421 ಮತಕೇಂದ್ರಗಳು ಕ್ಷೇತ್ರದಲ್ಲಿದ್ದು, 2.524 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. 184 ಸಾಮಾನ್ಯ, 186 ಸೂಕ್ಷ್ಮ, 47 ಅತಿ ಸೂಕ್ಷ್ಮ, 4 ಕ್ಲಿಷ್ಟಕರ ಮತಗಟ್ಟೆಗಳೆಂದು ವಿಂಗಂಡಿಸಲಾಗಿದೆ ಎಂದು ಮಹಶ್ವರ್ ರಾವ್ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ