Publish Date: Fri, 24 Sep 2021 (20:24 IST)
Updated Date: Fri, 24 Sep 2021 (20:29 IST)
ಬೆಂಗಳೂರಿನಲ್ಲಿ ಮತ್ತೆ ಪುಂಡರ ಗ್ಯಾಂಗ್ ಪುಂಡಾಟ ಪ್ರದರ್ಶಿಸೋ ಮೂಲಕ ರಸ್ತೆ ಬದಿಯಲ್ಲಿದ್ದ ಕಾರಿನ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ರಾಜರಾಜೇಶ್ವರಿನಗರದ ಕೃಷ್ಣಪ್ಪ ಗಾರ್ಡನ್ ನಲ್ಲಿ ಈ ಕೃತ್ಯ ನಡೆದಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ಬೈಕ್ ಗಳನ್ನೇರಿ ಬಂದ ಐವರ ಪುಂಡರ ಗ್ಯಾಂಗ್ ಕೈಲಿ ಕ್ರಿಕೆಟ್ ಬ್ಯಾಟ್ ಹಿಡಿದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರ್ ಗಳ ಮನಸ್ಸೋ ಇಚ್ಚೆ ಬ್ಯಾಟ್ ಬೀಸಿದ್ದಾರೆ. ಪುಂಡರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪುಂಡರ ಪುಂಡಾಟಕ್ಕೆ ರಸ್ತೆ ಬದಿ ನಿಲುಗಡೆ ಮಾಡಿದ್ದ ವಿವಿಧ ಬ್ರ್ಯಾಂಡ್ ನ 20 ಕಾರುಗಳಿಗೆ ಹಾನಿಯಾಗಿದೆ. ಘಟನೆ ಸಂಬಂಧ ಕಾರಿನ ಮಾಲೀಕರು ರಾಜರಾಜೇಶ್ವರಿನಗರ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ರಾಜರಾಜೇಶ್ವರಿನಗರ ಪೊಲೀಸ್ರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳ ಪತ್ತೆಗ ಶೋಧ ನಡೆಸ್ತಿದ್ದಾರೆ.