ತಮಿಳುನಾಡು ಹಾಗೂ ಕೇರಳ ರೀಜನ್‌ನ ಸಮುದ್ರ ಮೇಲ್ಮೈ ಮಟ್ಟಕ್ಕಿಂತ 3.1 ಕಿಲೋಮೀಟರ್ ಸುಳಿಗಾಳಿ ಬೀಸ್ತಾ ಇರೋ ಹಿನ್ನೆಲೆ ಕರಾವಳಿಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಮಳೆ ಪ್ರಮಾಣ ಹೆಚ್ಚಾಗಲಿದೆ.ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಗುಡುಗು ಸಹಿತ ಹೆಚ್ಚು ಮಳೆ ಆಗಲಿದೆ.ಇವತ್ತು ರಾತ್ರಿ ಕೋಲಾರ ,ಚಾಮರಾಜನಗರ, ತುಮಕೂರು, ಬೆಂಗಳೂರು, ರಾಮನಗರ ದಲ್ಲಿ ಮಳೆ ಆಗಲಿದೆ.
ನಾಳೆ ಚಿಕ್ಕಮಗಳೂರು, ಕೊಡಗು,ಶಿವಮೊಗ್ಗಕ್ಕೆ ನಾಳೆ ಮತ್ತು ನಾಡಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಅಕ್ಟೋಬರ್ 01- 22 ತಾರೀಖೀನವರೆಗೂ ರಾಜ್ಯದಲ್ಲಿ ಒಟ್ಟು 38% ಮಳೆ ಕೊರತೆಯಾಗಿದೆ.41% ಮೈಸೂರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.ದಕ್ಷಿಣ ಒಳನಾಡಿನ ಆರು ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ.
ಬೆಂಗಳೂರು ಗ್ರಾಮಂತಾರ ಜಿಲ್ಲೆ, ಹಾಸನ,ಕೊಡಗು ,ಮಂಡ್ಯ,ಚಿಕ್ಕಮಗಳೂರು, ಶಿವಮೊಗ್ಗ,ಕರಾವಳಿಯಲ್ಲಿ ವಾಡಿಕೆ ಮಳೆಯಾಗಲಿದೆ.ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ವಾಡಿಕೆಕ್ಕಿಂತ ಕಡಿಮೆ ಮಳೆಯಾಗಲಿದೆ.ಉಡುಪಿ-೩೦% ಮಳೆ ಕೊರತೆ ,ಉತ್ತರ ಕನ್ನಡ-೨೩% ಮಳೆ ಕೊರತೆ,ಕಾವೇರಿ ಜಲಾನಯನ ಪ್ರದೇಶ 1 ರಿಂದ 22 ರವರೆಗೆ ವಾಡಿಕೆ ಮಳೆ ವರದಿಯಾಗಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.