Publish Date: Wed, 24 May 2023 (15:54 IST)
Updated Date: Wed, 24 May 2023 (13:39 IST)
ರಾತ್ರಿ ರಾಜಕಾಲುವೆ ನೀರು ನುಗ್ಗಿ ಅನುಗ್ರಹ ಲೇಔಟ್ ಲ್ಲಿ ಅವಾಂತರವಾಗಿದೆ.ಬೆಳಗ್ಗೆಯಾದ್ರೂ ರಸ್ತೆಗಳಲ್ಲಿ ಬಿದ್ದಿರೋ ರಾಶಿ ರಾಶಿ ಮಣ್ಣು ಬಿದ್ದಿದೆ.ಚರಂಡಿ ನೀರಿನಿಂದ ಗಬ್ಬು ವಾಸನೆ, ರಸ್ತೆ ತುಂಬಾ ಕೆಸರು,ಹಲವು ಮನೆಗಳಲ್ಲಿ ಸಂಪ್ ಗಳಿಗೆ ನೀರು ನುಗ್ಗಿ ಸಂಕಷ್ಟ ಉಂಟಾಗಿದೆ.ಸದ್ಯ ಬಿಬಿಎಂಪಿ ಪೌರಕಾರ್ಮಿಕರಿಂದ ಸ್ವಚ್ಚತಾ ಕಾರ್ಯ ಮುಂದುವರೆಸಿದ್ದಾರೆ.ರಸ್ತೆಯಲ್ಲಿರೋ ಕೆಸರನ್ನ ಸಿಬ್ಬಂದಿ ತೆರವು ಮಾಡ್ತಿದ್ದಾರೆ.ಅಧಿಕಾರಿಗಳು ಸ್ಪಂದಿಸ್ತಾರೆ,ಆದ್ರೆ ತಡವಾಗಿ ಬರ್ತಾರೆ.ಎಲ್ಲ ಮುಗಿದ ಮೇಲೆ ಬಂದ್ರೆ ಏನು ಪ್ರಯೋಜನ ಅಂತಾ ಜನರು ಆಕ್ರೋಶ ಹೊರಹಾಕಿದ್ದಾರೆ.ಈಗಲಾದ್ರೂ ಎಚ್ಚೆತ್ತುಕೊಳ್ಳಿ ಎಂದು ಬಿಬಿಎಂಪಿ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕ್ತಿದ್ದಾರೆ.