ಕಾಂಗ್ರೆಸ್ನ ಮಾಜಿ ಅಧ್ಯಕ್ಷ, ವಯನಾಡ್ ಸಂಸದ ರಾಹುಲ್ ಗಾಂಧಿ ಬಯನಾಡ್ನಲ್ಲಿ ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ ನೀಡಿದ್ದಾರೆ. ಅಲ್ಲಿರುವ ಚಾಕೊಲೇಟ್ ಕಾರ್ಖಾನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಅಲ್ಲಿನ ಕಾರ್ಮಿಕರೊಂದಿಗೆ ಬೆರೆತು, ಚಾಕಲೇಟ್ ತಯಾರಿಸುವುದನ್ನು ಕಲಿತುಕೊಂಡರು. ಚಾಕೊಲೇಟ್ ಫ್ಯಾಕ್ಟರಿ ಯಶಸ್ವಿಯಾಗಿ ನಡೆಯುತ್ತಿದ್ದು, ಅಲ್ಲಿರುವ ಕಾರ್ಮಿಕರೆಲ್ಲರೂ ಮಹಿಳೆಯರೇ ಎಂಬುದನ್ನ ರಾಹುಲ್ ಗಾಂಧಿ ತಿಳಿದುಕೊಂಡರು. ಅದಲ್ಲದೆ, ಅವರು ಅಲ್ಲಿನ ಮಹಿಳಾ ಕಾರ್ಮಿಕರನ್ನು ಹೊಗಳಿದರು. ಆ ಕಾರ್ಖಾನೆಯಲ್ಲಿ ಸುಮಾರು 70 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಚಾಕೊಲೇಟ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿರುವ ಚಾಕೊಲೇಟ್ ರುಚಿ ನೋಡಿದ ರಾಹುಲ್ ಗಾಂಧಿ ವ್ಹಾವ್ ಎಂದು ಉದ್ಘಾರ ತೆಗೆದಿದ್ದಾರೆ.