Select Your Language

Notifications

webdunia
webdunia
webdunia
webdunia

ರಾಹುಲ್​​​ ರೋಡ್ ಶೋಗೆ ಭರ್ಜರಿ ಸಿದ್ಧತೆ

ರಾಹುಲ್​​​ ರೋಡ್ ಶೋಗೆ ಭರ್ಜರಿ ಸಿದ್ಧತೆ
ಉಡುಪಿ , ಗುರುವಾರ, 27 ಏಪ್ರಿಲ್ 2023 (20:40 IST)
ರಾಜ್ಯ ಚುನಾವಣಾ ರಣಕಣ ರಂಗೇರುತ್ತಿದ್ದಂತೆ ಕೇಂದ್ರ ನಾಯಕರ ವಾಹನಗಳ ಸದ್ದು ಹೆಚ್ಚಾಗಿ ಕೇಳಿ ಬರುತ್ತಿದೆ. ಈ ಬಾರಿ ಗೆಲುವು ಸಾಧಿಸಲು ತೊಡೆತಟ್ಟಿ ನಿಂತಿರುವ ಕಾಂಗ್ರೆಸ್, ಕೇಂದ್ರ ನಾಯಕರನ್ನು ರಾಜ್ಯಕ್ಕೆ ಕರೆಸಿದೆ. ಬುಧವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಪ್ರಚಾರ ಮಾಡಿದರು. ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ಮಾಡಲಿದ್ದಾರೆ. ಉಡುಪಿಯ ಕಾಪುವಿನ ಮೀನುಗಾರರೊಂದಿಗೆ ಮಧ್ಯಾಹ್ನ 3.50ಕ್ಕೆ ಸಂವಾದ ನಡೆಸಲಿದ್ದಾರೆ. ಮಂಗಳೂರಿನಲ್ಲಿ ಇಂದು ಸಂಜೆ 5.30ಕ್ಕೆ ರಾಹುಲ್ ಗಾಂಧಿ ಪ್ರಚಾರ ಮಾಡಲಿದ್ದಾರೆ. ನಗರದ ಕಲೆಕ್ಟರ್ಸ್ ಗೇಟ್​​​​ನಿಂದ ನೆಹರೂ ಮೈದಾನದವರೆಗೆ ಸುಮಾರು ಎರಡು ಕಿಮೀ ರೋಡ್ ಶೋ ನಡೆಸಲಿದ್ದಾರೆ. ಅದ್ದೂರಿ ರೋಡ್ ಶೋ ನಡೆಯಲಿದ್ದು ದಕ ಜಿಲ್ಲೆಯ ಎಲ್ಲ ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಂಜೆ 5ಗಂಟೆಗೆ ಅಡ್ಯಾರ್‌ನಲ್ಲಿ ಪ್ರಚಾರದ ಸಭೆ ನಡೆಸಲಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಮಂಗಳೂರು ನಗರದ ಬಲ್ಮಠ, ಕಲೆಕ್ಟರ್‌ ಗೇಟ್ ನಡುವೆ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಮಂಗಳೂರಿನ ನಗರ ಮಧ್ಯೆ ರೋಡ್ ಶೋ ನಡೆಸುವುದಕ್ಕೆ ಅವಕಾಶ ಸಿಗದ ಕಾರಣ ಮಂಗಳೂರು ನಗರ ಹೊರವಲಯದ ಅಡ್ಯಾರ್​​​​ನಲ್ಲಿರುವ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಪ್ರಚಾರ ಸಭೆ ಏರ್ಪಡಿಸಲಾಗಿದೆ. ಪ್ರಚಾರ ಸಭೆ ನಡೆಯೋದಕ್ಕೂ ಮುನ್ನ ಅಡ್ಯಾರ್‌ನಲ್ಲಿ ಹೆದ್ದಾರಿ ಉದ್ದಕ್ಕೆ ಒಂದಷ್ಟು ರೋಡ್ ಶೋ ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಲೆಂದು ಶೆಟ್ಟರ್​ರನ್ನ ಅಭ್ಯರ್ಥಿಯಾಗಿಸಿಲ್ಲ