Publish Date: Thu, 27 Apr 2023 (20:20 IST)
Updated Date: Thu, 27 Apr 2023 (19:58 IST)
ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಮಾಜಿ ಸಿಎಂ B.S. ಯಡಿಯೂರಪ್ಪ ಮಾಡಿದ್ದ ಆರೋಪಕ್ಕೆ ಶೆಟ್ಟರ್ ಅಭಿಮಾನಿ ತಿರುಗೇಟು ನೀಡಿದ್ದಾರೆ.. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಶೆಟ್ಟರ್ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಈ ಬಾರಿ ಅವರು ಸೋಲುತ್ತಾರೆ.. ಇದನ್ನ ನಾನು ರಕ್ತದಲ್ಲಿ ಬರೆದು ಕೊಡ್ರೇನೆ ಎಂದು BSY ಹೇಳಿದ್ರು. ಇದಕ್ಕೆ ತಿರುಗೇಟು ಕೊಟ್ಟಿರುವ ಶೆಟ್ಟರ್ ಅಭಿಮಾನಿ, ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಯಕರ್ತ ಮಂಜುನಾಥ್ ಎಂಬಾತ ಜಗದೀಶ್ ಶೆಟ್ಟರ್ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ ಎಂದು ರಕ್ತದಲ್ಲಿಯೇ ಬರೆದು ಕೊಟ್ಟಿದ್ದಾರೆ.