Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಬೆಸ್ಟ್ ಸ್ಟ್ಯಾಂಡ್‌ ಅಪ್ ಕಾಮಿಡಿಯನ್: ಕಂಗನಾ ರಣಾವತ್

Opposition Leader Rahul Gandi

Sampriya

ನವದೆಹಲಿ , ಸೋಮವಾರ, 1 ಜುಲೈ 2024 (20:51 IST)
ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹಿಂದೂ ಧರ್ಮವನ್ನು "ಅವಮಾನ" ಮಾಡಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಆಗ್ರಹಿಸಿದರು.

ಈ ಬಗ್ಗೆ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ ರಣಾವತ್ ಅವರು, ರಾಹುಲ್ ಗಾಂಧಿ ಅವರು ಇಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಉತ್ತಮ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಆಕ್ಟ್ ಮಾಡಿದ್ದಾರೆ ಎಂದರು.

ರಾಹುಲ್ ಗಾಂಧಿ ಅವರು ಹಿಂದೂತ್ವದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿವಾದಾತ್ಮಕ ಹೇಳಿಕೆ ಬಗ್ಗೆ ಬಿಜೆಪಿ ಆಕ್ರೋಶ ಹೊರಹಾಕುತ್ತಿದೆ.

ರಾಹುಲ್ ಗಾಂಧಿ ಅವರು ದೇವರ ಫೋಟೋಗಳನ್ನು ಮೇಜಿನ ಮೇಲೆ ಇಟ್ಟರು, ಆದರೆ ನಮಗೆ ದೇವರ ಫೋಟೋಗಳನ್ನು ದೇವಾಲಯದ ಒಳಗೆ ಇಡಬೇಕು ಎಂದು ನಮಗೆ ತಿಳಿದಿದೆ. ರಾಹುಲ್ ಗಾಂಧಿ ನಡೆಯಿಂದ ಹಿಂದೂ ದೇವರುಗಳಿಗೆ ಅವಮಾನವಾಗಿದೆ. ಅವರು ಹಿಂಸಾತ್ಮಕ ಸ್ವಭಾವವನ್ನು ಹೊಂದಿದ್ದಾರೆ... ಅವರು ತಮ್ಮ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕು ಎಂದು ನಾನು ಭಾವಿಸುತ್ತೇನೆ" ಎಂದು ರನೌತ್ ಆಕ್ರೋಶ ಹೊರಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯುವಕನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಮತ್ತೇ ಪೊಲೀಸ್‌ ಕಸ್ಟಡಿಗೆ