Select Your Language

Notifications

webdunia
webdunia
webdunia
webdunia

ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ, ಸಿಲಿಕಾನ್ ಸಿಟಿ ಮಂದಿಗೆ ಟ್ರಾಫಿಕ್ ಬಿಸಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

Sampriya

ಬೆಂಗಳೂರು , ಗುರುವಾರ, 7 ಆಗಸ್ಟ್ 2025 (15:25 IST)
Photo Credit X
ಬೆಂಗಳೂರು: ನಾಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪ್ರೀಂಡಂಪಾರ್ಕ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆ ನಾಳೆ ಸಿಲಿಕಾನ್ ಸಿಟಿ ಮಂದಿಗೆ ಟ್ರಾಪಿಕ್ ಬಿಸಿ ಎದುರಾಗುವ ಸಾಧ್ಯತೆಯಿದೆ. 

ಪೊಲೀಸರು ಕೆಲವು ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಲೋಕಸಭೆ ಚುನವಾಣೆ ವೇಳೆ ಮಹಾದೇವಪುರದಲ್ಲಿ ಮತಗಳ್ಳತನವಾಗಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಕೇಂದ್ರದ ಈ ಕ್ರಮ ವಿರೋಧಿಸಿ ಪ್ರತಿಭಟನಾ ರ‍್ಯಾಲಿ ನಡೆಯಲಿದ್ದು, ದಾಖಲೆ ಬಿಡುಗಡೆ ಮಾಡಲಿದ್ದಾರೆ. 


ಪ್ರತಿಭಟನೆ ಹಿನ್ನೆಲೆ ಕೆಲವೆಡೆ ಸಂಚಾರ್ ಬಂದ್ ಮಾಡಿ, ಅವುಗಳಿಗೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಇಲ್ಲಿದೆ ಸಂಚಾರ ಬಂದ್‌ ಹಾಗೂ ಅದರ ಪರ್ಯಾಯ ಮಾರ್ಗಗಳು: 

ಶಾಂತಲಾ ಜಂಕ್ಷನ್ ಮತ್ತು ಖೋಡ್ ಸರ್ಕಲ್‌ನಿಂದ ಆನಂದ್ ರಾವ್ ಫ್ಲೈಓವರ್, ಒಲ್ಡ್ ಜೆಡಿಎಸ್ ರಸ್ತೆ, ಶೇಷಾದ್ರಿಪುರ ರಸ್ತೆ ಬಂದ್ ಮಾಡಲಾಗಿದೆ. 

ಅದಕ್ಕೆ ಪರ್ಯಾಯವಾಗಿ ಲುಲು ಮಾಲ್, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕರ್, ರೇಸ್ ಕೋರ್ಸ್ ಫ್ಲೈಓವರ್ ಕಡೆಯಿಂದ ಪ್ರಯಾಣಿಸಬಹುದು.

ಇನ್ನೂ ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಅದಕ್ಕೆ ಪರ್ಯಾಯವಾಗಿ ಕೆಜಿ ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ರಾಜೀವ್ ಗಾಂಧಿ ಸರ್ಕಲ್, ರೇಸ್ ಕೋರ್ಸ್ ಫ್ಲೈಓವರ್ ಮೂಲಕ ಹೋಗಬಹುದು

ಚಾಲುಕ್ಯದಿಂದ ಮೈಸೂರು ಬ್ಯಾಂಕ್ ಕಡೆಗೆ ಸಂಚಾರ ನಿಷೇಧಿಸಲಾಗಿದ್ದು, ಚಾಲುಕ್ಯ ಸರ್ಕಲ್, ರಾಜಭವನ ರಸ್ತೆ, ಇನ್‌ಫೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್‌ನಿಂದ ಸಂಚರಿಸಲು ಸೂಚಿಸಲಾಗಿದೆ.

ಇನ್ನೂ ಕಾಳಿದಾಸ ರಸ್ತೆ, ಕನಕದಾಸ ಜಂಕ್ಷನ್‌ಕಡೆಯಿಂದ ಫ್ರೀಡಂಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಕನಕದಾಸ ಜಂಕ್ಷನ್‌ನಿಂದ ಬಲ ತಿರುವು ಪಡೆದು ಸಾಗರ ಜಂಕ್ಷನ್‌ಕಡೆಗೆ ಪ್ರಯಾಣಿಸಬಹುದು.

ಮೌರ್ಯ ಸುಬ್ಬಣ್ಣ ಜಂಕ್ಷನ್‌ನಿಂದ ಫ್ರೀಡಂಪಾರ್ಕ್‌ಗೆ ತೆರಳುವವರು ಸುಬ್ಬಣ್ಣ ಜಂಕ್ಷನ್‌ನಿಂದ ಬಲ ತಿರುವು ಆನಂದ್ ರಾವ್ ಸರ್ಕಲ್ ಕಡೆಗೆ ಸಂಚರಿಸಬಹುದು

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಸುತ್ತ ಮುತ್ತಾ ಅಹಿತಕರ ಘಟನೆಯಲ್ಲಿ ಭಾರೀ ಬೆಳವಣಿಗೆ