Publish Date: Sun, 16 Apr 2023 (15:31 IST)
Updated Date: Sun, 16 Apr 2023 (18:35 IST)
ಬೀದರ್ : ಚುನಾವಣಾ ಚಾಣಕ್ಯ ಅಮಿತ್ ಶಾ ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿದ ಬಳಿಕ ಈಗ ರಾಹುಲ್ ಗಾಂಧಿ ಬೀದರ್ ಜಿಲ್ಲಾ ಪ್ರವಾಸದ ಮೂಲಕ ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿದ್ದಾರೆ.
ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೀದರ್ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಭಾಲ್ಕಿಯಲ್ಲಿ ಈಶ್ವರ್ ಖಂಡ್ರೆ ಪರ ಹಾಗೂ ಹುಮ್ನಾಬಾದ್ನಲ್ಲಿ ರಾಜಶೇಖರ ಪಾಟೀಲ್ ಪರ ಕ್ಯಾಂಪೇನ್ ಮಾಡಲಿದ್ದಾರೆ. ಸೋಮವಾರ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ 11 ಗಂಟೆಗೆ ಬೀದರ್ ಏರಬೇಸ್ಗೆ ಆಗಮಿಸಲಿರುವ ರಾಹುಲ್ 11:30ಕ್ಕೆ ಬೀದರ್ ಏರಬೇಸ್ನಿಂದ ಹೆಲಿಕಾಪ್ಟರ್ ಮೂಲಕ ಭಾಲ್ಕಿಗೆ ಆಗಮಿಸಲಿದ್ದಾರೆ.
11:40ಕ್ಕೆ ನಾಮಪತ್ರ ಸಲ್ಲಿಕೆಯ ಬಹಿರಂಗ ಸಮಾವೇಶ ಭಾಗಿಯಾಗಿ ಬಳಿಕ 1 ಗಂಟೆಗೆ ಬೃಹತ್ ಬಹಿರಂಗ ರ್ಯಾಲಿಯಲ್ಲಿ ಹಾಗೂ ಬಳಿಕ 1:30ಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನಾಮಪತ್ರ ಸಲ್ಲಿಕೆ ವೇಳೆ ರಾಹುಲ್ ಭಾಗಿಯಾಗಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ಗೆ ಪ್ರಯಾಣ ಮಾಡಲಿರುವ ರಾಹುಲ್ 1:30 ರಿಂದ 2:30 ರವರೆಗೆ ಹುಮ್ನಾಬಾದ್ನ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
Ramya kosira
Publish Date: Sun, 16 Apr 2023 (15:31 IST)
Updated Date: Sun, 16 Apr 2023 (18:35 IST)