Select Your Language

Notifications

webdunia
webdunia
webdunia
webdunia

ಚಿತ್ರರಂಗದಲ್ಲಿ ರಚಿತಾ ಶ್ರಮ ಎದ್ದು ಕಾಣುತ್ತಿದೆ: ಡಿಂಪಲ್‌ ಕ್ವೀನ್‌ 'ಮ್ಯಾಟ್ನಿ' ಲುಕ್‌ಗೆ ದರ್ಶನ್ ಫಿದಾ

Challenging Start Darshan

Sampriya

ಬೆಂಗಳೂರು , ಗುರುವಾರ, 28 ಮಾರ್ಚ್ 2024 (17:21 IST)
Photo Courtesy X
ಬೆಂಗಳೂರು:  ನಟ ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತರಾಮ್ ಅಭಿನಯದ ಬಹುನೀರಿಕ್ಷಿತ ಮ್ಯಾಟ್ನಿ ಸಿನಿಮಾದ ಟ್ರೈಲರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು.  

ಮ್ಯಾಟ್ನಿ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಾಲಿ ಧನಂಜಯ್ ಭಾಗಿಯಾಗಿದ್ದರು. ಇನ್ನೂ ಸಿನಿಮಾದಲ್ಲಿ ರಚಿತಾ ಡೆವಿಲ್ ಲುಕ್‌ಗೆ ಅವರು ಫಿದಾ ಆದರು.

ನಂತರ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್,  ಮ್ಯಾಟ್ನಿ ಸಿನಿಮಾ ಇದೇ 5ನೇ ತಾರೀಖು ಎಲ್ಲ ಚಿತ್ರಮಂದಿರಗಳಲ್ಲಿ ಬರುತ್ತಿದೆ. ಮ್ಯಾಟ್ನಿ ಸಿನಿಮಾ ಎಂದ ಮಾತ್ರಕ್ಕೆ ಮ್ಯಾಟ್ನಿ ಟೈಮಲ್ಲಿ ಹೋಗ್ಬೇಡಿ, ಮಾರ್ನಿಂಗ್ ಶೋಗೆ ಹೋಗಿ' ಎಂದರು.

ಇದೇ ಸಮಯದಲ್ಲಿ ಸತೀಶ್‌ ಬಗ್ಗೆಯೂ ದರ್ಶನ್‌ ಮಾತನಾಡಿ, ನೀನಾಸಂನಿಂದ ಬಂದು ಸಿನಿಮಾ ರಂಗದಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಿ ಇಲ್ಲಿಯವರೆಗೆ ಸಾಧನೆ ಮಾಡಿದ್ದಾರೆ. ಈ ಜರ್ನಿ ತುಂಬಾ ದೊಡ್ಡದು ಎಂದರು.

ರಚಿತಾ ರಾಮ್ ಅವರು ಹತ್ತು ವರ್ಷಗಳ ಕಾಲ ನಾಯಕಿಯಾಗಿ ಸಿನಿಮಾರಂಗದಲ್ಲಿ ಇದ್ದು ಜಹಿಸಿದ್ದಾರೆ. ಅವರ ಶ್ರಮ ಎದ್ದು ಕಾಣುತ್ತಿದೆ ಎಂದು ರಚಿತಾ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಅರವಿಂದ್ ಕೇಜ್ರಿವಾಲ್ ಇಡಿ ಬಂಧನದ ಅವಧಿ ಏ.1ರ ವರೆಗೆ ವಿಸ್ತರಿಸಿದ ಕೋರ್ಟ್‌