Publish Date: Sat, 25 May 2019 (17:11 IST)
Updated Date: Sat, 25 May 2019 (17:14 IST)
ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ಕಾಂಗ್ರೆಸ್ ಶಾಸಕ ಎಲ್.ಬಿ.ಪಿ ಭೀಮಾನಾಯ್ಕ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಬಕೋ ಒಕ್ಕೂಟದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆಯನ್ನು ನಗರದಲ್ಲಿನ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿತ್ತು. ಬೆಳಿಗ್ಗೆ ಅಧ್ಯಕ್ಷ ಸ್ಥಾನಕ್ಕೆ ಭೀಮಾನಾಯ್ಕ, ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ಪ ಎ. ವಾದಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಇದರಿಂದ ಅವರ ಆಯ್ಕೆ ಅವಿರೋಧವಾಗಿದೆಂದು ಚುನಾವಣಾಧಿಕಾರಿ ಬಳ್ಳಾರಿಯ ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ ಘೋಷಣೆ ಮಾಡಿದ್ದಾರೆ. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬುಕ್ಕ ಮಲ್ಲಿಕಾರ್ಜುನ, ಒಕ್ಕೂಟದ ನಿರ್ದೇಶಕರುಗಳಾದ ಭೀಮನಗೌಡ, ಎ.ರವೀಂದ್ರ, ಜಿ.ಸತ್ಯನಾರಾಯಣ, ಎನ್.ಸೀತಾರಾಮ ಲಕ್ಷ್ಮಿ, ಹೆಚ್.ಮರಳುಸಿದ್ದಪ್ಪ, ಹೆಚ್.ಶ್ರೀಕಾಂತಪ್ಪ, ನಾಗಮಣಿ ಜಿಂಕಾಲ್, ವೆಂಕನಗೌಡ, ಹಿರೇಗೌಡ್ರ, ಎಂ.ಸತ್ಯನಾರಾಯಣ, ಕವಿತಾ ಇದ್ದರು.