Select Your Language

Notifications

webdunia
webdunia
webdunia
webdunia

ಜ್ಯಾನವ್ಯಾಪಿ ಮಸೀದಿಗೆ ಸಂಬಂಧವಿದೆ ಎಂದ ಆರ್‌. ಅಶೋಕ್‌!

R ASHOKE

geetha

ರಾಮನಗರ , ಮಂಗಳವಾರ, 20 ಫೆಬ್ರವರಿ 2024 (18:03 IST)
ರಾಮನಗರ :  ವಕೀಲರ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿರುವ ಪ್ರಕರಣಕ್ಕೆ ರಾಜಕೀಯ ತಿರುವು ದೊರೆಕಿದೆ. ಎಸ್‌ಡಿಪಿಐ ಕಾರ್ಯಕರ್ತ ಹಾಗೂ ವಕೀಲ ಚಾಂದಾಪಾಷಾ ಗ್ಯಾನವ್ಯಾಪಿ ಮಸೀದಿಯ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ ಹಾಕಿ ಬಂಧಿತನಾಗಿದ್ದ. ಈಗನ ಆತನ ಕಡೆಯವರ ಕುಮ್ಮಕ್ಕಿನಿಂದ ಸುಳ್ಳು ದೂರು ನೀಡಲಾಗಿದೆ ಎಂದು ಬಿಜೆಪಿ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಆರೋಪಿಸಿದ್ದಾರೆ.ಇಂದು ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಪ್ರತಿಭಟನಾ ಸ್ಥಳಕೆ ಭೇಟಿ ನೀಡಿ ವಕೀಲರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾನನ್ನು ಪೊಲೀಸರು ಬಂಧಿಸಿದ್ದ ಪ್ರಕರಣದ ವಿರುದ್ಧ ಸೇಡು ತೀರಿಸಿಕೊಳ್ಳಲು   ಸುಳ್ಳು ದೂರಿನ ಆಧಾರದ ಮೇಲೆ ರಾಮನಗರದ ಐಜೂರು ಪೊಲೀಸ್ ಠಾಣೆ ಪಿಎಸ್ ಐ ತನ್ವೀರ್ ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಈ ಘಟನೆ ಅತ್ಯಂತ ಖಂಡನೀಯ ಎಂದಿರುವ ಆರ್‌. ಅಶೋಕ್‌, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ‌ ನೇತೃತ್ವದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರಿಗೆ ರೆಕ್ಕೆ ಬಂದಂತಾಗಿದೆ ಎಂದು ಟೀಕಿಸಿದ್ದಾರೆ.
 
ಜೊತೆಗೆ, ಗೃಹಸಚಿವ ಜಿ. ಪರಮೇಶ್ವರ್‌  ಅವರು ಈ ಕೂಡಲೇ ಪಿಸ್ ಐ ತನ್ವೀರ್ ಅವರನ್ನು ಅಮಾನತು ಮಾಡಬೇಕು. ರಾಮನಗರದ ವಕೀಲರ ಮೇಲೆ ದಾಖಲಿಸಿರುವ ಸುಳ್ಳು FIR ವಜಾ ಮಾಡಬೇಕು. ಪೊಲೀಸ್ ಅಧಿಕಾರಗಳು ಸಮಾಜ ಘಾತುಕ ಶಕ್ತಿಗಳ ಏಜೆಂಟರಂತೆ ವರ್ತಿಸದಂತೆ ಖಡಕ್ ಎಚ್ಚರಿಕೆ ನೀಡಬೇಕು ಎಂದು ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಡ್ರಗ್ಸ್‌ ಇಟ್ಟ ಖದೀಮ