Select Your Language

Notifications

webdunia
webdunia
webdunia
webdunia

ಸುಳ್ಳು ದೂರು ನೀಡಿ ಸಿಕ್ಕಿಬಿದ್ದ ಬಿಗ್‌ ಬಾಸ್‌ ಸ್ಪರ್ಧಿ

crime news
ಬೆಂಗಳೂರು: ಪೊಲೀಸರಿಗೆ ಸುಳ್ಳು ದೂರು ನೀಡಿ ಸಮಯವ್ಯರ್ಥಗೊಳಿಸಿದ ಆರೋಪದ ಮೇಲೆ ಬಿಗ್‌ ಬಾಸ್‌ ಕಿರುತೆರೆ ಕಾರ್ಯಕ್ರಮದ ಸ್ಪರ್ಧಿ ಆಡಂ ಪಾಶಾ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣಾ ವ್ಯಾಪ್ತಿಯ ವ್ಯಾಲಂಕೇಣಿ ಬ್ರಿಡ್ಜ್‌ ಬಳಿ ವಾಟರ್‌ ಟ್ಯಾಂಕರ್‌ ವಾಹನವೊಂದು ಅತಿವೇಗ ಬರುತ್ತಿತ್ತು. ಈ ಕುರಿತು ಚಾಲಕನನ್ನು ಪ್ರಶ್ನಿಸಿದ್ದಕ್ಕಾಗಿ ಆತ ತನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಆಡಂ ಪಾಶಾ ದೂರು ನೀಡಿದ್ದ. 

ತನಿಖೆಯ ವೇಳೆ ಸಿಸಿಟಿವಿ ಕೆಮೆರಾಗಳನ್ನು ಪರಿಶೀಲಿಸಿದಾಗ ಆಡಂ ಕಳ್ಳಾಟ ಬಯಲಾಗಿದ್ದು, ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಬಂದು ಆತ ಸುಳ್ಳು ದೂರು ನೀಡಿರುವುದು ಸ್ಪಷ್ಟವಾಗಿತ್ತು. ಸುಳ್ಳು ದೂರು ನೀಡಿದ ಆರೋಪದ ಮೇಲೆ ಆಡಂ ಪಾಶಾ ವಿರುದ್ದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಂಬರ್‌ ಪ್ಲೇಟ್‌ ನಕಲಿ ಜಾಲದ ಬಗ್ಗೆ ಪೊಲೀಸರ ಎಚ್ಚರಿಕೆ