ಬೆಂಗಳೂರು: ಹಾಸನದಲ್ಲಿ ಮೊನ್ನೆಯಷ್ಟೇ ಗಣೇಶ ಮೆರವಣಿಗೆ ವೇಳೆ ಟ್ರಕ್ ಹರಿದು 10 ಜನ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಆದರೆ ಇದುವರೆಗೆ ಅವರಿಗೆ ಪರಿಹಾರ ಹಣ ಸಿಕ್ಕಿಲ್ಲ. ಅದೇ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನದ ಮೊಸಳೆಹೊಸಹಳ್ಳಿ ಗಣೇಶ ವಿಸರ್ಜನೆ ಮರವಣಿಗೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಟ್ರಕ್ ಹರಿದು 10 ಜನರು ಸಾವನ್ನಪ್ಪಿ, 21 ಜನರು ಗಾಯಗೊಂಡ ಪ್ರಕರಣದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ 50,000 ರೂಪಾಯಿ ಪರಿಹಾರವನ್ನೂ ನೀಡಿಲ್ಲ, ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿಲ್ಲ.
ಕನಿಷ್ಠ ಪಕ್ಷ ಸಚಿವರು, ಶಾಸಕರು ಅಥವಾ ಹಿರಿಯ ಅಧಿಕಾರಿಗಳು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಕನಿಷ್ಠ ಸೌಜನ್ಯವೂ ತೋರುತ್ತಿಲ್ಲ.
ಸಿಎಂ ಸಿದ್ದರಾಮಯ್ಯನವರೇ, ಹಿಮಾಚಲ ಪ್ರದೇಶದಲ್ಲಿ ಪ್ರವಾಹವಾದರೆ ₹5 ಕೋಟಿ ರೂಪಾಯಿ ಕೊಡಲು ದುಡ್ಡಿದೆ. ವಯನಾಡಿನಲ್ಲಿ ಭೂಕುಸಿತವಾದರೆ 100 ಮನೆ ಕಟ್ಟಿಕೊಡಲು ದುಡ್ಡಿದೆ. ಆದರೆ ನಮ್ಮ ರಾಜ್ಯದ ಯುವಕರ ಚಿಕಿತ್ಸೆಗೆ ಹಣ ಕೊಡಲು ದುಡ್ಡಿಲ್ಲ. ಈ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದಿದ್ದಾರೆ.