ಆರ್ ಅಶೋಕ್ ಬಂದು ಚೆನ್ನಾಗಿ ಟೈಮ್ ಪಾಸ್ ಮಾಡಿಕೊಂಡು ಹೋಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ವ್ಯಂಗ್ಯವಾಡಿದ್ದಾರೆ.ಕನಕಪುರದಿಂದ ಆರ್ ಅಶೋಕ್ ಸ್ಪರ್ಧೆ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಸಾಮ್ರಾಟ್ ಆದ್ರೂ ಬರಲಿ, ಚಕ್ರವರ್ತಿ ಆದ್ರೂ ಬರಲಿ,ಕನಕಪುರದಲ್ಲಿ ಒಳ್ಳೆಯ ಆತಿಥ್ಯ ಸಿಗುತ್ತೆ. ತುಂಬಾ ಮಿಲ್ಟ್ರಿ ಹೋಟೆಲ್ ಗಳಿವೆ.ಬಂದು ಚೆನ್ನಾಗಿ ಟೈಮ್ ಪಾಸ್ ಮಾಡಿಕೊಂಡು ಹೋಗಲಿ ಎಂದು ಆರ್ ಅಶೋಕ್ ಗೆ ಟಾಂಗ್ ನೀಡಿದರು.