Publish Date: Wed, 12 Apr 2023 (19:30 IST)
Updated Date: Wed, 12 Apr 2023 (19:32 IST)
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿಲ್ಲ. ಇದರಿಂದಾಗಿ ಅವರು ಅಸಮಾಧಾನಗೊಂಡಿದ್ದಾರೆ. ಈ ನಡುವೆಯೇ ಮಾಜಿ ಸಿಎಂ ಯಡಿಯೂರಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಜಗದೀಶ್ ಶೆಟ್ಟರ್ ಅವರು ನಮ್ಮ ನಾಯಕರು.ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ತಪ್ಪೋದಿಲ್ಲ. ಅವರ ಸ್ಪರ್ಧೆ ನಿಶ್ಚಿತ ಎಂದು ಹೇಳಿದ್ದಾರೆ.ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ಕಾರಣಾಂತರಗಳಿಂದ ಮೊದಲ ಪಟ್ಟಿಯಲ್ಲಿ ಶೆಟ್ಟರ್‌ಗೆ ಟಿಕೆಟ್ ಪ್ರಕಟವಾಗಿಲ್ಲ. ಆದ್ರೆ ಎರಡನೇ ಪಟ್ಟಿಯಲ್ಲಿ ಶೆಟ್ಟರ್ ಅವರ ಹೆಸರು ಇರಲಿದೆ. ಅವರು ಬಿಜೆಪಿ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.ಇನ್ನೂ ಒಂದಿಷ್ಟು ಜನಕ್ಕೆ ಮಾತ್ರ ಅಸಮಾಧಾನ ಉಂಟಾಗಿದೆ ಅವರೊಂದಿಗೆ ಮಾತುಕತೆ ಮಾಡ್ತೀವಿ ಸದ್ಯದಲ್ಲೇ ಎಲ್ಲಾ ಪರಿಹಾರವಾಗುತ್ತೆ ಎಂದು ವಿಶ್ವಸ ವ್ಯಕ್ತಪಡಿಸಿದ್ರು.ಜಗದೀಶ್ ಶೆಟ್ಟರಿಗೆ ಟಿಕೆಟ್ ಸಿಕ್ಕೇ ಸಿಗುತ್ತೆ. ಆ ವಿಶ್ವಾಸ ನನಗೆ ಇದೆ.ಇನ್ನೂ ಲಕ್ಷ್ಮಣ ಸವದಿಗೆ ಪಕ್ಷ ಎಲ್ಲಾ ಗೌರವ ನೀಡಿದೆ.ಅವರಿಗೆ ಪಕ್ಷ ಎಲ್ಲಾ ಸ್ಥಾನ ಮಾನ ಕೊಟ್ಟಿದೆ..ಆದರೂ ಅವರು ರಾಜೀನಾಮೆ ಬಗ್ಗೆ ಮಾತಾಡ್ತಾರೆ.ಅವರೇ ಯೋಚನೆ ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ರು