Daily Horoscope
✕

ದಪ್ಪ ಚರ್ಮದ ಸರ್ಕಾರದ ಚಳಿ ಬಿಡಿಸುತ್ತೇವೆ: ಆರ್.ಆಶೋಕ್

ಕೃಷ್ಣವೇಣಿ ಕೆ
ಸೋಮವಾರ, 21 ಸೆಪ್ಟಂಬರ್ 2026 (15:06 IST)
ಬೆಂಗಳೂರು: ಇದು ದಪ್ಪ ಚರ್ಮದ ಸರ್ಕಾರ. ಈ ಸರ್ಕಾರಕ್ಕೆ ಚಳಿ ಬಿಡಿಸುವ ಮತ್ತು ಕಿವಿ ಹಿಂಡುವ ಕೆಲಸವನ್ನು ಸದನದಲ್ಲಿ ಮಾಡೇ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ. 
 
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಇವರು, ಕಳೆದ ಬಾರಿ ನಾವು ವಿಧಾನಸಭೆ ಕಲಾಪದಲ್ಲಿ ಈ ಸರ್ಕಾರಕ್ಕೆ ಚಳಿ ಬಿಡಿಸಿದ್ದೆವು. ನಮ್ಮ ಹೋರಾಟದಿಂದ ಒಂದು ವಿಕೆಟ್ ಬಿದ್ದು ಹೋಯಿತು. ಈ ಬಾರಿಯೂ ವಿರೋಧ ಪಕ್ಷವಾಗಿ ನಮ್ಮ ಕೆಲಸವನ್ನು ಸಮರ್ಥವಾಗಿ ಮಾಡುತ್ತೇವೆ ಎಂದು ಹೇಳಿದರು .
 
ಈ ಸರ್ಕಾರ ವಿಶೇಷ ಅಧಿವೇಶನವನ್ನು ಬೇಗ ಮುಗಿಸುವ ಸನ್ನಾಹದಲ್ಲಿದೆ. ರಾಜ್ಯದಲ್ಲಿನ ಬರಪರಿಸ್ಥಿತಿ ಬಗ್ಗೆ ಚರ್ಚೆಗೆ ಎರಡು ದಿನ ಹೆಚ್ಚುವರಿಯಾಗಿ ಮೀಡಲಿಡಿ ಎಂದು ಕೇಳಿದ್ದೇವೆ. ಸರ್ಕಾರ ಏನು ಮಾಡುವುದೋ ನೋಡಬೇಕು. ಬರಸಂಬಂಧ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ನಾಲ್ಕು ತಿಂಗಳು ಮೊದಲೇ ಎಚ್ಚರವಾಗಬೇಕಿತ್ತು. ಇದು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ. ಸರ್ಕಾರ ಬರವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ರಾಜ್ಯದಲ್ಲಿ 2800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆ ತಾಳದೆ ನಿನ್ನೆ ಚಾಮರಾಜ ನಗರದಲ್ಲಿ ರೈತರೊಬ್ಬರು ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲವನ್ನು ಸದನದಲ್ಲಿ ಪ್ರಮುಖವಾಗಿ ಚರ್ಚೆಗೆ ಎಳೆಯುತ್ತೇವೆ ಎಂದು ಹೇಳಿದರು. 
 
ಬಿಜೆಪಿ, ಕಸ್ತೂರಿರಂಗನ್ ವರದಿಗೆ ವಿರೋಧ ಮಾಡಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಇದ್ದಾಗಲೂ ವಿರೋಧ ಮಾಡಿದ್ದೆವು. ನಮಗೆ ಜನರ ಭಾವನೆ ಮುಖ್ಯ, ಬದುಕು ಮುಖ್ಯ. ಎನ್‍ಡಿಎ ಮೈತ್ರಿ ಪಕ್ಷವಾಗಿರುವ ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸೇರಿ ನಾವು ಕಸ್ತೂರಿರಂಗನ್ ವರದಿ ವಿರೋಧಿಸಿದ್ದೇವೆ. ಬರ ಮತ್ತು ಕಸ್ತೂರಿರಂಗನ್ ವರದಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡ್ತೇವೆ. ಜನರ ಪರವಾಗಿ ನಾವು ಧ್ವನಿ ಎತ್ತುತ್ತೇವೆ ಎಂದು ತಿಳಿಸಿದರು .
 
ನಿಯಮದ ಪ್ರಕಾರ ವಿಶೇಷ ಅಧಿವೇಶನಕ್ಕೆ ಅವಕಾಶ ಇಲ್ಲ. ಈ ಸರ್ಕಾರಕ್ಕೆ ಯಾರು ಸಲಹೆ ನೀಡುತ್ತಾರೋ ಗೊತ್ತಿಲ್ಲ. ಈ ಅಧಿವೇಶನದಲ್ಲಿ ಮಸೂದೆಗಳ ಮಂಡನೆಯೂ ಇದೆಯಂತೆ. ರೈತರ ವಿಚಾರ, ಕೆಪಿಎಸ್‍ಸಿ ಹಗರಣ, ಬಿಡದಿ ಟೌನ್‍ಶಿಪ್ ವಿಚಾರ ಬಾರದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇವನ್ನೆಲ್ಲ ಮುಚ್ಚಿಹಾಕಲು ವಿಶೇಷ ಅಂತ ನೆಪಮಾಡಿ ಅಧಿವೇಶನ ಕರೆದಿದ್ದಾರೆ. ವಿಶೇಷ ಅಧಿವೇಶನ ಕರೆದಾಗ ಮಾನ್ಯ ರಾಜ್ಯಪಾಲರು ಅನುಮೋದಿಸಬೇಕು. ಇವೆಲ್ಲ ನಿಯಮಗಳನ್ನು ಡಿ.ಕೆ.ಶಿವಕುಮಾರ್ ಅವರೇ ತಮ್ಮ ಪುಸ್ತಕದಲ್ಲಿ ಸೃಷ್ಟಿಸಿಕೊಂಡಿದ್ದಾರೆ. ಬೇರೆ ವಿಚಾರವೆಲ್ಲಾದರೂ ಕಲಾಪದಲ್ಲಿ ಚರ್ಚೆಯಾದರೆ ಸರ್ಕಾರಕ್ಕೆ ಇರುಸುಮರಿಸು ಆಗಿ ಇನ್ನೊಂದು ವಿಕೆಟ್ ಬೀಳುತ್ತೆ ಅಂತ ಭಯ ಆಗಿದೆ. ನಾವೀಗ ಈಗಾಗಲೇ ನಿಲುವಳಿ ಸೂಚನೆ ಸಲ್ಲಿಸಿದ್ದೇವೆ ಎಂದು ವಿವರಿಸಿದರು.

Related News

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೆಟ್ರೊ ವಿಚಾರದಲ್ಲಿ ರಾಜ್ಯ ಸರಕಾರದ ಕುಚೇಷ್ಟೆ: ತೇಜಸ್ವಿ ಸೂರ್ಯ

ಮೋದಿ ನಾಳೆ ಬಂದು ಏನು ಮಾಡ್ತಾರೆ, ಕನ್ನಡದಲ್ಲಿ ಎರಡು ನಮಸ್ಕಾರ, ಶುಭಾಶಯ ಹೇಳ್ತಾರೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು ಪಿಂಕ್ ಮೆಟ್ರೋ ಲೈನ್ ಉದ್ಘಾಟನೆ ಕ್ರೆಡಿಟ್ ವಾರ್: ತಮ್ಮ ಭಾಷಣ ರದ್ದು ಮಾಡಿದ್ದಕ್ಕೆ ಸಚಿವ ಕೃಷ್ಣಭೈರೇಗೌಡ ಆಕ್ರೋಶ

ಬೆಂಗಳೂರಿನಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಆಭರಣ ಪ್ರಿಯರಿಗೆ ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್

ಬೆಂಗಳೂರು 7 ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕ್ಯಾಬ್ ಚಾಲಕ ಇಂದುಶೇಖರ್ ಮಗಳ ಸ್ಪೋಟಕ ಸತ್ಯ ಬಯಲು

ಮುಂದಿನ ಸುದ್ದಿ
Show comments