ಬೆಂಗಳೂರು: ಪ್ರಿಯಾಂಕ್ ಖರ್ಗೆಯವರೇ ಸಿಎಂ ನೀವು ಹೇಳಿದ್ರೆ ಬೇಗ ಕೇಳ್ತಾರೆ. ಹೀಗಾಗಿ ಇದೊಂದು ಕೆಲಸ ಮಾಡಿಕೊಟ್ಬಿಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆ ಬಗ್ಗೆ ಸಾರ್ವಜನಿಕರಿಂದಲೂ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಈ ನಡುವೆ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ನಿಷೇಧ ವಿಚಾರ ಎಳೆದು ತಂದಿರುವುದು ವಿಪಕ್ಷ ಬಿಜೆಪಿ ಟೀಕೆಗೆ ಗುರಿಯಾಗಿದೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿರುವಾಗ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ವಿಚಾರವನ್ನು ಅನಗತ್ಯವಾಗಿ ಎಳೆದು ತಂದು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸುತ್ತಿದೆ.
ಈ ನಡುವೆ ಆರ್ ಅಶೋಕ್ ಟ್ವೀಟ್ ಮೂಲಕ ಬೆಂಗಳೂರಿನ ಹದಗೆಟ್ಟ ರಸ್ತೆ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ರಸ್ತೆ ರಿಪೇರಿ ಮಾಡಿ ಅಂತ ಹೇಳಿ ಹೇಳಿ ಬೇಸತ್ತಿರುವ ಬೆಂಗಳೂರಿನ ಜನತೆಗೆ ಒಂದು ಉಪಕಾರ ಮಾಡಿ ಪುಣ್ಯ ಕಟ್ಟಿಕೊಳ್ಳಿ.
ಪ್ರಗಾಢ ನಿದ್ದೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ತಕ್ಷಣ ಒಂದು ಪತ್ರ ಬರೆಯಿರಿ. ನೀವು ಹೇಳಿದರೆ ಮುಖ್ಯಮಂತ್ರಿಗಳು ತಕ್ಷಣ ಪಾಲನೆ ಮಾಡುತ್ತಾರೆ. ಥ್ಯಾಂಕ್ಸ್ ಇನ್ ಅಡ್ವಾನ್ಸ್! ಎಂದು ವ್ಯಂಗ್ಯ ಮಾಡಿದ್ದಾರೆ.