Webdunia - Bharat's app for daily news and videos

Install App

ಜಮೀರ್ ಅಹ್ಮದ್ ಆಧುನಿಕ ಟಿಪ್ಪು ಸುಲ್ತಾನ್, ಹಿಂದೂಗಳು ಜೈ ಶ್ರೀರಾಮ್ ಅನ್ನುವಂತಿಲ್ಲ: ಆರ್ ಅಶೋಕ್ ಕಿಡಿ

Krishnaveni K
ಸೋಮವಾರ, 28 ಅಕ್ಟೋಬರ್ 2024 (15:55 IST)
ಬೆಂಗಳೂರು: ವಿಜಯಪುರದಲ್ಲಿ ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಈಗ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ಸಚಿವ ಜಮೀರ್ ಅಹ್ಮದ್ ರನ್ನು ಆಧುನಿಕ ಟಿಪ್ಪು ಸುಲ್ತಾನ್ ಎಂದಿದ್ದಾರೆ.

ಕೆಲವು ಸಮಯದಿಂದ ಲವ್ ಜಿಹಾದ್ ಎಂದಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರದ ಕೃಪೆಯಿಂದ ಲ್ಯಾಂಡ್ ಜಿಹಾದ್ ಶುರುವಾಗಿದೆ. ಲ್ಯಾಂಡ್ ಜಿಹಾದ್ ಮೂಲಕ ವಕ್ಫ್ ಬೋರ್ಡ್ ಬಳಸಿಕೊಂಡು ಬಡ ರೈತರ ಜಮೀನು ಕಬಳಿಸಲಾಗುತ್ತಿದೆ ಎಂದು ಆರ್ ಅಶೋಕ್ ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂಗಳು ಜೈ ಶ್ರೀರಾಮ್ ಹೇಳುವಂತಿಲ್ಲ, ಗಣೇಶನ ವಿಸರ್ಜನೆ ಮೆರವಣಿಗೆ ಮಾಡುವಂತಿಲ್ಲ. ಹಿಂದೂಗಳಿಗೆ ಭದ್ರತೆ ಇಲ್ಲ. ಈಗ ವಿಜಯಪುರದ 15 ಸಾವಿರ ಎಕರೆಯನ್ನು ವಕ್ಫ್ ಬೋರ್ಡ್ ಮುಖಾಂತರ ನುಂಗಿ ಹಾಕಲು ಹವಣಿಕೆ ನಡೆದಿದೆ. ಇದು ಸರ್ಕಾರದಿಂದಲೇ ನಡೆಯುತ್ತಿರುವ ಲ್ಯಾಂಡ್ ಜಿಹಾದ್ ಎಂದು ಕಿಡಿ ಕಾರಿದ್ದಾರೆ.

ಈ ಹಿಂದೆ ಟಿಪ್ಪು ಸುಲ್ತಾನ್, ಔರಂಗಜೇಬನಂತಹ ದೊರೆಗಳು ಹಿಂದೂಗಳ ಭೂಮಿಗಳನ್ನು ಕಬಳಿಸುತ್ತಿದ್ದರು. ಇದೀಗ ಸಚಿವ ಜಮೀರ್ ಅಹ್ಮದ್ ಆಧುನಿಕ ಟಿಪ್ಪು ಸುಲ್ತಾನ್. ವಕ್ಫ್ ಹೆಸರು ಹೇಳಿಕೊಂಡು ಹಿಂದೂಗಳ, ಬಡ ರೈತರ ಜಮೀನು ನುಂಗುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್, ಸೋನಿಯಾ ಜತೆಗಿನ ಭೇಟಿ ಕುಟುಂಬದ ಜತೆ ಸಮಯ ಕಳೆದ ಹಾಗೇ: ಎಂಕೆ ಸ್ಟಾಲಿನ್‌

ಬಿಟ್ರೇ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ: ವಾಟಾಳ್ ನಾಗರಾಜ್‌

ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಕೋವಿಡ್ ಭೀತಿ: ಸಿಲಿಕಾನ್ ಸಿಟಿಯಲ್ಲಿ ಮಗುವಿಗೆ ಸೋಂಕು ದೃಢ

Gang Rape: ಸಾಂಗ್ಲಿಯಲ್ಲಿ MBBS ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಧಿಕಾರ ಸರ್ಕಾರಕ್ಕಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments