ಅಜೆಕಾರು ಬಾಲಕೃಷ್ಣ ಹತ್ಯೆ ಪ್ರಕರಣ: ಪ್ರತಿಮಾ ಹೇಗೆಲ್ಲಾ ವಿಷ ಬೆರೆಸಿಕೊಡುತ್ತಿದ್ದಳು ವಿವರಗಳು ಬಹಿರಂಗ

Krishnaveni K
ಸೋಮವಾರ, 28 ಅಕ್ಟೋಬರ್ 2024 (14:55 IST)
ಕಾರ್ಕಳ: ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿಕೊಂಡು ಪತಿ ಬಾಲಕೃಷ್ಣ ಪೂಜಾರಿಯನ್ನು ಹತ್ಯೆ ಮಾಡಿದ್ದ ಪ್ರತಿಮಾಳ ಒಂದೊಂದೇ ಕರಾಳ ಮುಖ ಈಗ ಬಯಲಾಗುತ್ತಿದೆ. ಆಕೆ ಗಂಡನಿಗೆ ಹೇಗೆ ವಿಷಪ್ರಾಷನ ಮಾಡಿಸುತ್ತಿದ್ದಳು ಎಂಬ ವಿವರ ಈಗ ಬಹಿರಂಗವಾಗಿದೆ.

ಕಾರ್ಕಳದ ಅಜೆಕಾರಿನ ಬಾಲಕೃಷ್ಣ ಪೂಜಾರಿ ಹತ್ಯೆ ಪ್ರಕರಣ ಈಗ ಭಾರೀ ಸದ್ದು ಮಾಡುತ್ತಿದೆ. ಆರೋಪಿ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾಳೆ. ಈ ವೇಳೆ ಪ್ರಿಯಕರ ದಿಲೀಪ್ ವಿಷ ಎಲ್ಲಿಂದ ಖರೀದಿ ಮಾಡಿದ್ದು ಎಂಬ ವಿವರಗಳನ್ನು ಬಾಯ್ಬಿಟ್ಟಿದ್ದಾನೆ.

ಬಾಲಕೃಷ್ಣ ಪೂಜಾರಿಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಕುಟುಂಬಸ್ಥರು ತೆಗೆದಿರಿಸಿದ್ದ ಅಸ್ಥಿಯಲ್ಲಿ ಎರಡು ತುಂಡು ವಶಪಡಿಸಿಕೊಂಡ ಪೊಲೀಸರು ಇದನ್ನು ಪರೀಕ್ಷೆಗೆ ರವಾನಿಸಿದ್ದಾರೆ. ಇದರಿಂದ ಆರೋಪಿಗಳು ಆರ್ಸೆನಿಕ್ ಟ್ರೈ ಆಕ್ಸೈಡ್ ಎನ್ನುವ ವಿಷ ನೀಡಿದ್ದು ತಿಳಿದುಬಂದಿದೆ.

ಉಡುಪಿಯ ಲ್ಯಾಬ್ ನಿಂದ ಪ್ರಿಯಕರ ದಿಲೀಪ್ ಆರ್ಸೆನಿಕ್ ಟ್ರೈ ಆಕ್ಸೈಡ್ ತಂದು ಪ್ರತಿಮಾಗೆ ಕೊಟ್ಟಿದ್ದ. ಪ್ರತಿಮಾ ಇದನ್ನು ಪ್ರತಿನಿತ್ಯವೂ ಸ್ವಲ್ಪ ಸ್ವಲ್ಪವೇ ಆಹಾರದಲ್ಲಿ ಬೆರೆಸಿ ಗಂಡನಿಗೆ ನೀಡುತ್ತಿದ್ದಳು. ವಿಪರ್ಯಾಸವೆಂದರೆ ಗಣೇಶ ಹಬ್ಬದ ಪವಿತ್ರ ದಿನದಂದೇ ಮೊದಲ ಬಾರಿಗೆ ವಿಷವುಣಿಸಿದ್ದಳು. ಹಬ್ಬದ ಅಡುಗೆಯಲ್ಲಿ ವಿಷ ಮಿಕ್ಸ್ ಮಾಡಿ ಗಂಡನಿಗೆ ಉಣಬಡಿಸಿದ್ದಳು ಪಾಪಿ ಪತ್ನಿ.

ಮೊದಲು ವಿಷ ಸೇವಿಸಿದ್ದ ಬಾಲಕೃಷ್ಣ ವಾಂತಿ ಮಾಡಿಕೊಂಡಿದ್ದರು. ಬಳಿಕ ಇದು ವಿಪರೀತಕ್ಕೆ ತಿರುಗಿ ಕೈ, ಕಾಲುಗಳ ಸ್ವಾಧೀನ ಕಳೆದುಕೊಳ್ಳುವ ಹಂತಕ್ಕೆ ತಲುಪಿತು. ಆರ್ಸೆನಿಕ್ ಟ್ರೈ ಆಕ್ಸೈಡ್ ಎನ್ನುವುದು ವಾಸನೆ ರಹಿತವಾದ ಬಿಳಿ ಅಥವಾ ಹಳದಿ ಬಣ್ಣದ ವಿಷಾಂಶವಾಗಿದೆ. ಇದೀಗ ದಿಲೀಪ್ ಗೆ ಆರ್ಸೆನಿಕ್ ನೀಡಿದ್ದ ಕಾರ್ಕಳದ ಲ್ಯಾಬ್ ಮಾಲಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಟ್ಟು ಎರಡು ಬಾಟಲಿ ವಿಷವನ್ನು ಪತಿಗೆ ನೀಡಿದ್ದಳು ಎನ್ನಲಾಗಿದೆ. ಮೊದಲ ಬಾಟಲಿ ಖಾಲಿಯಾದಾಗ ಪ್ರಿಯಕರನಿಗೆ ಆ ಬಾಟಲಿಯನ್ನು ಹಿಂದಿರುಗಿಸಿದ್ದಳು. ಈ ಖಾಲಿ ಬಾಟಲಿಯನ್ನು ಕಾರ್ಕಳದ ಕುಕ್ಕಂದೂರಿನ ಅಯ್ಯಪ್ಪನಗರದ ಬಳಿ ಬಿಸಾಕಿದ್ದಾಗಿ ಆತ ಹೇಳಿದ್ದ. ಸ್ಥಳಕ್ಕೆ ತೆರಳಿ ಪರಿಶೀಲಿಸಿದರೂ ಆ ಬಾಟಲಿ ಸಿಕ್ಕಿರಲಿಲ್ಲ. ವಿಷದ ಬಾಟಲಿಯನ್ನು ಪ್ರತಿಮಾಳ ಬ್ಯೂಟಿ ಪಾರ್ಲರ್ ಬಳಿ ದಿಲೀಪ್ ನೀಡಿದ್ದ. ಆ ಸ್ಥಳದ ಮಹಜರು ಪ್ರಕ್ರಿಯೆಯೂ ಮುಗಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ‌ ಮಾರಾಟ ಜಾಲದ ಕಿಂಗ್‌ ಪಿನ್‌ ದಂಪತಿ ಸಿಸಿಬಿ ಬಲೆಗೆ

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು ವದಂತಿ: ಅಡಿಯಾಲಾ ಜೈಲಿನ ಮುಂದೆ ಹೈಡ್ರಾಮಾ

ಈ ವಿಚಾರಕ್ಕೆ ರಾಹುಲ್, ಸೋನಿಯಾ ಭೇಟಿಯಾಗಬೇಕೆಂದ ಮಲ್ಲಿಕಾರ್ಜುನ ಖರ್ಗೆ

ದೆಹಲಿ ಸ್ಪೋಟ, ಇಂದು ಬಂಧಿಯಾಗಿರುವ ಆರೋಪಿಯ ಕೈವಾಡ ಕೇಳಿದ್ರೆ ಶಾಕ್ ಆಗುತ್ತೆ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಿಗ್‌ ರಿಲೀಫ್‌, ತೀರ್ಪು ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments