Daily Horoscope
✕

ಪರಿಷತ್‍ ಗೆಲುವು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪಷ್ಟ ಸಂದೇಶ: ಆರ್.ಅಶೋಕ್

ಕೃಷ್ಣವೇಣಿ ಕೆ
ಬುಧವಾರ, 28 ಅಕ್ಟೋಬರ್ 2026 (17:43 IST)
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‍ಗೆ ನಡೆದ ನಾಲ್ಕೂ ಕ್ಷೇತ್ರಗಳ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಗಳು ಪ್ರಚಂಡ ಜಯಭೇರಿ ಸಾಧಿಸಿರುವುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‍ಡಿಎ ಗೆಲುವಿನ ಸ್ಪಷ್ಟ ಸಂದೇಶ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ. 
 
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಹೋದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 160 ಕ್ಕೂ ಹೆಚ್ಚು ಸ್ಥಾನಗಳು ನಮಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಎ.ಪಿ. ರಂಗನಾಥ್ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ಹೆಸರು ಘೋಷಣೆ ಮಾಡಿದಾಗಿನಿಂದ ಎರಡೂ ಪಕ್ಷದ ಜಿಲ್ಲಾಧ್ಯಕ್ಷರು ಸಮನ್ವಯದಿಂದ ಅಪಸ್ವರ ಎತ್ತದೆ ಕೆಲಸ ಮಾಡಿದರು. ಎಲ್ಲರ ಸಹಕಾರದಿಂದ ಗೆಲುವು ಸುಲಭವಾಯಿತು. ಪಾಲಿಕೆ ಮಾಜಿ ಸದಸ್ಯರೂ ಸಹ ಕೈ ಜೋಡಿಸಿದರು. ಇದೆಲ್ಲದರಿಂದ ಸೋಲನ್ನೇ ಕಾಣದ ಆಲ್ ಪಾರ್ಟಿ ಪುಟ್ಟಣ್ಣ  ಮುಖಭಂಗ ಅನುಭವಿಸಿದ್ದಾರೆ ಎಂದರು. ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಜೀ ಅವರ ಮಾರ್ಗದರ್ಶನದಲ್ಲಿ ಈ ಗೆಲುವು ಸಾಧ್ಯವಾಗಿದೆ ಎಂದು ವಿವರಿಸಿದರು. 
 
ಪುಟ್ಟಣ್ಣ ಅವರನ್ನು ಡಿಕೆಶಿ ಅವರ ಅಭ್ಯರ್ಥಿ ಎಂದೇ ಬಿಂಬಿಸಿದ್ದರು. ಈಗ ಅವರು ಸೋತಿದ್ದಾರೆ. ಆದ್ದರಿಂದ ಈ ಸೋಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋಲು. ಡಿಕೆಶಿ ಅವರಿಗೆ ಮೊದಲ ಆಘಾತವನ್ನು ಬಿಜೆಪಿ ಮತ್ತು ಜೆಡಿಎಸ್ ನೀಡಿವೆ ಎಂದು ವ್ಯಂಗ್ಯವಾಡಿದರು.
 
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದರ ನಡುವೆ ಸಿ.ಡಿ ಹಗರಣ ಬಂದಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಜನರಿಗೆ ಅನಿಸಿದೆ. ಕಾಂಗ್ರೆಸ್ ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಸ್ಟಿಂಗ್ ಆಪರೇಷನ್ ಬಗ್ಗೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ. ನಮ್ಮನ್ನು ಸ್ಟಿಂಗ್ ಮಾಡಿ ಕಾಂಗ್ರೆಸ್‍ನವರೇ ಸಿಲುಕಿಸಿದವರು ಎಂದು ಸಚಿವ ಯತೀಂದ್ರ ಹೇಳಿದ್ದಾರೆ. ಸಿಕ್ಕಿಕೊಂಡ ನಾಯಕಿ ಸಹ ಕಾಂಗ್ರೆಸ್‍ನವರೇ ಎಂದು ಹೇಳಿದರು. 
 
ಕಾಂಗ್ರೆಸ್ ಸೋತಾಗೆಲ್ಲ ಇವಿಎಂ ಬೇಡ ಅನ್ನುತಿದ್ದರು. ಈ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗಿದೆ. ಆದರೂ ಕಾಂಗ್ರೆಸ್ ಸೋತಿದೆ. ಇವಿಎಂ ನಲ್ಲಿ ಚುನಾವಣೆ ಮಾಡಿದರೂ, ಎನ್‍ಡಿಎ ಗೆದ್ದಿದೆ. ಇನ್ನಾದರೂ ಕಾಂಗ್ರೆಸ್ ಇವಿಎಂ  ಮೇಲೆ ದೂರುವುದನ್ನು ಬಿಡಲಿ. ಕಾಂಗ್ರೆಸ್ ನವರಿಗೆ ಕಪಾಳಮೋಕ್ಷ ಆಗಿದೆ. 224 ಕ್ಷೇತ್ರಗಳಿಗೆ ಬ್ಯಾಲೆಟ್ ಪೇಪರ್‍ನಲ್ಲಿ ಚುನಾವಣೆ ನಡೆದರೆ 224 ಸ್ಥಾನಗಳನ್ನೂ ಎನ್‍ಡಿಎ ಗೆಲ್ಲಲಿದೆ. ಕಾಂಗ್ರೆಸ್ ಕಥೆ ಗೋವಿಂದ. ಬ್ಯಾಲೆಟ್ ಪೇಪರ್‍ನಲ್ಲೂ ಕಾಂಗ್ರೆಸ್ ನವರ ಬೇಳೆ ಬೇಯಲಿಲ್ಲ ಎಂದು ಹೇಳಿದರು. 
 
ಜಿಲ್ಲಾಧ್ಯಕ್ಷರು, ಕಾರ್ಯಕರ್ತರು, ಮುಖಂಡರು, ಎರಡೂ ಪಕ್ಷದ ನಾಯಕರು ಸಮನ್ವಯದಿಂದ ಕೆಲಸ ಮಾಡಿದ್ದಾರೆ. ಒಗ್ಗಟ್ಟು ತೋರಿದ್ದಾರೆ. ಈ ಒಗ್ಗಟ್ಟು ಮುಂದಿನ ವಿಧಾನಸಭಾ ಚುನಾವಣೆಗೂ ಮುಂದುವರಿಯಲಿದೆ. ರಾಜ್ಯಕ್ಕೆ ಸುಭದ್ರ ಎನ್‍ಡಿಎ ಸರ್ಕಾರ ತರಲಿದ್ದೇವೆ. ನಮ್ಮ ಕಾರ್ಯಕರ್ತರಿಗೆ ಶಕ್ತಿ ನೀಡಿದೆ ಎಂದು ವಿವರಿಸಿದರು. 
 
ಎಸ್‍ಐಆರ್ ಸಂಬಂಧ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗುವುದನ್ನು ರದ್ದು ಮಾಡುವುದು ಒಳ್ಳೆಯದು. ನಾಲ್ಕೂ ಕಡೆ ಸೋತಿರುವುದರಿಂದ ಕಾಂಗ್ರೆಸ್ ನಾಯಕರು ಯಾವುದಾದರೂ ರೆಸಾರ್ಟ್‍ಗೆ ಹೋಗಿ ಸೋಲಿನ ಚಿಂತನ ಮಂಥನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಟನಲ್ ರಸ್ತೆ ಮಾಡಲು ಮುಂದಾದ ಡಿ.ಕೆ.ಶಿವಕುಮಾರ್ ಅವರನ್ನು ಮತದಾರರು ಟನಲ್ ಒಳಗೇ ಕಳಿಸಿದ್ದಾರೆ ಎಂದರು. 
 

Related News

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೋನಿಯಾ ಗಾಂಧಿ ಬದುಕೇ ನಮಗೆ ಪಾಠ ಶಾಲೆ: ಬಿಕೆ ಹರಿಪ್ರಸಾದ್

Gold Price: ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆ

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿದ್ದರಾಮಯ್ಯಗೆ ಹಿಂಬದಿ ಸೀಟು ಯಾಕೆ

ಮನೆ ಕಟ್ಟುವಾಗ ಸಿಕ್ತು 13 ಅಡಿ ಉದ್ದದ ಬೃಹತ್ ಕಾಳಿಂಗ: Video

ಮುಂದಿನ ಸುದ್ದಿ
Show comments