Daily Horoscope

Select Your Language

Notifications

webdunia
webdunia
webdunia
webdunia

ಮತಗಳ್ಳತನ ಕುರಿತ ಕಾಂಗ್ರೆಸ್ಸಿನ ಸುಳ್ಳನ್ನು ತಿರಸ್ಕರಿಸಿದ ಪ್ರಜ್ಞಾವಂತ ಮತದಾರರು: ಯಡಿಯೂರಪ್ಪ

BS Yediyurappa
ಬೆಂಗಳೂರು: ಮತಗಳ್ಳತನ ಕುರಿತ ಕಾಂಗ್ರೆಸ್ಸಿನ ಸುಳ್ಳನ್ನು ಪ್ರಜ್ಞಾವಂತ ಮತದಾರರು ವಿಧಾನಪರಿಷತ್ತಿನ ಚುನಾವಣಾ ಫಲಿತಾಂಶದ ಮೂಲಕ ತಿರಸ್ಕರಿಸಿರುವುದಕ್ಕೆ ಇದು ಜ್ವಲಂತ ಉದಾಹರಣೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ಲೇಷಿಸಿದ್ದಾರೆ.
 
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಖಜಾನೆ ಲೂಟಿ, ಹಗಲುದರೋಡೆ ಮಾಡಿ ಜನರಿಗೆ ದ್ರೋಹ ಮಾಡಿದ ಸರಕಾರ ಇದು. ಈ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ. ವಿಧಾನಪರಿಷತ್ತಿನ ಈ ಫಲಿತಾಂಶದ ಹಿನ್ನೆಲೆಯಲ್ಲಿ ಈ ಸರಕಾರವು ತಕ್ಷಣ ರಾಜೀನಾಮೆ ಕೊಡಬೇಕು. ಜನಾದೇಶ ಪಡೆಯೋಣ ಎಂದು ಸವಾಲು ಹಾಕಿದರು. 
 
ಇದು ಮತಪತ್ರದ ಮೂಲಕ ನಡೆದ ಚುನಾವಣೆ. ಇವಿಎಂ ಮೂಲಕ ಈ ಚುನಾವಣೆ ನಡೆದಿಲ್ಲ. ಶಿಕ್ಷಕರು, ಪದವೀಧರ ಕ್ಷೇತ್ರಗಳ ಚುನಾವಣೆ ಎಂದರು. ಆಡಳಿತಾರೂಢ ಪಕ್ಷದ ವಿರುದ್ಧ ಎನ್‍ಡಿಎ ಸ್ಪರ್ಧಿಸಿ ಗೆದ್ದಿದೆ. ಜನರ ಮನಸ್ಸಿನಲ್ಲಿ ಕಾಂಗ್ರೆಸ್ ವಿರುದ್ಧ ಇರುವ ಆಕ್ರೋಶಕ್ಕೆ ಹಿಡಿದ ಒಂದು ಕೈಗನ್ನಡಿ ಎಂದು ನುಡಿದರು.
 
ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಇದು ಆಡಳಿತವಿರೋಧಿ ಅಲೆ. ಕೆ.ಎಂ.ಸುರೇಶ್ ಅವರು 23 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಸಂಕನೂರು ಅವರು 9 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಶೀಲ್ ನಮೋಶಿ ಅವರು 3 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ರಂಗನಾಥ್ ಅವರು 908 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ವಿವರಿಸಿದರು.
 
ಜನರ ಮನಸ್ಸಿನಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ರಾಜ್ಯದ 6 ಕೋಟಿ ಜನರು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಅಭಿವೃದ್ಧಿ ಶೂನ್ಯತೆ ರಾಜ್ಯದಲ್ಲಿದೆ. ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಇದು ಭ್ರಷ್ಟಾಚಾರ, ಹಗರಣಗಳ ಸರಕಾರ ಎಂದು ಆರೋಪಿಸಿದರು.
 
ಕೆಪಿಎಸ್ಸಿ ಭ್ರಷ್ಟಾಚಾರ, ಬೆಲೆ ಏರಿಕೆ ಮಿತಿ ಮೀರಿದೆ. ಸುಮಾರು 3500 ರೈತರ ಆತ್ಮಹತ್ಯೆ, ಬರಗಾಲ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ಕಳೆದ 8 ತಿಂಗಳಿನಿಂದ ಅಂಗವಿಕಲರ, ವೃದ್ಧಾಪ್ಯ ವೇತನ ನೀಡದ ಸರಕಾರ ಇದೆಂದು ಟೀಕಿಸಿದರು. ಮುಖ್ಯಮಂತ್ರಿಗಳು, ಕಬ್ಬು ಬೆಳೆಗಾರರಿಗೆ ಹಣ ನೀಡಲು ಜೋಬಿನಲ್ಲಿ ದುಡ್ಡಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಜನರು ಕೊಟ್ಟ ತೆರಿಗೆ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
 
ಭ್ರಷ್ಟಾಚಾರ, ಸ್ಟಿಂಗ್ ಆಪರೇಷನ್‍ನಲ್ಲೇ ಕಾಲಹರಣ- ಗೋವಿಂದ ಕಾರಜೋಳ
 
ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ಸರಕಾರದ ಆಡಳಿತವನ್ನು ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸ್ಟಿಂಗ್ ಆಪರೇಷನ್‍ನಲ್ಲೇ ಇವರು ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕುರ್ಚಿ ಕಚ್ಚಾಟಕ್ಕಾಗಿ ಇವೆಲ್ಲ ನಡೆದಿದೆ. ರಾಜ್ಯದ ಸುಶಿಕ್ಷಿತ ಜನರು ಕಾಂಗ್ರೆಸ್ಸಿನ ದುರಾಡಳಿತ, ಅಭಿವೃದ್ಧಿರಹಿತ ಬರಿಯ ಭ್ರಷ್ಟಾಚಾರವನ್ನು ತಿರಸ್ಕರಿಸಿ ನಿನ್ನೆ ನಡೆದ ಚುನಾವಣೆ ಮೂಲಕ ಆದೇಶ ನೀಡಿದ್ದಾರೆ ಎಂದು ತಿಳಿಸಿದರು. ಸ್ವಾಭಿಮಾನ ಇದ್ದರೆ ಈ ಸರಕಾರ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕಲು ತೀರ್ಮಾನ ಮಾಡಿದ್ದೇವೆ: ವಿಜಯೇಂದ್ರ