Publish Date: Mon, 12 Mar 2018 (11:28 IST)
Updated Date: Mon, 12 Mar 2018 (11:30 IST)
ಬೆಂಗಳೂರು : ಬೆಂಗಳೂರಿನ ದಾಸರಹಳ್ಳಿಯ ಬಿಜೆಪಿ ಪಾದಯಾತ್ರೆಯಲ್ಲಿ ಆರ್. ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರ ಸರ್ಕಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಾದಯಾತ್ರೆಯಲ್ಲಿ ಭಾಗವಹಿಸಿದ ಅವರು,’ಪಾದಯಾತ್ರೆಗೆ ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಕ್ರಿಮಿನಲ್ ಮುಕ್ತ ಬೆಂಗಳೂರು ಬೇಕಾಗಿದೆ. ಬೆಂಗಳೂರಿನ ಜನರ ರಕ್ಷಣೆ ಮಾಡುವ ಸರ್ಕಾರ ಬೇಕಿದೆ. ಜನರನ್ನು ಅಭಿವೃದ್ಧಿ ಮಾಡುವ ಸರ್ಕಾರ ನಮಗೆ ಬೇಕು. ಡೋಂಗಿ, ಕ್ರಿಮಿನಲ್ ಗೂಂಡಾ ಸರ್ಕಾರ ಕಿತ್ತೊಗೆಯಬೇಕು’ ಎಂದು ಸಿಎಂ ಸಿದ್ದರಾಮಯ್ಯ ಅವರ ಸರ್ಕಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ