ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಆರ್‌ ಅಶೋಕ್

Webdunia
ಬುಧವಾರ, 14 ಡಿಸೆಂಬರ್ 2022 (17:55 IST)
ನಮ್ಮ‌ರಾಷ್ರ್ಟೀಯ  ಅಧ್ಯಕ್ಷರಾದ ನಡ್ಡಾ ಅವರು ಬಿಜೆಪಿ ಜಿಲ್ಲಾ ಕಛೇರಿ ಉದ್ಘಾಟನೆಗೆ ಬರ್ತಿದ್ದಾರೆ.ಎಲ್ಲಾ ಮಂತ್ರಿಗಳು ಒಂದೊಂದು ಜಿಲ್ಲೆಗೆ ಹೋಗಿ ಆಫೀಸ್ ಉದ್ಘಾಟನೆ ಮಾಡ್ತಾರೆ.ನಡ್ಡಾ‌ ಅವರು ಒಂದು ಕಡೆ ಉದ್ಘಾಟನೆ ಮಾಡ್ತಾರೆ.ನಾನು ಕೋಲಾರಕ್ಕೆ ಹೋಗಿ ಕಛೇರಿ ಉದ್ಘಾಟನೆ ಮಾಡ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದಾರೆ.
 
ಇನ್ನು ಒಳಮೀಸಲಾತಿ ಸಮಿತಿ ರಚನೆಗೆ ಸಿದ್ದರಾಮಯ್ಯ ಆಕ್ರೋಶ ವಿಚಾರವಾಗಿಯೂ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಸಿದ್ದರಾಮಯ್ಯ ಗೆ  ಸಚಿವ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.ಮಾಧುಸ್ವಾಮಿ ನೇತೃತ್ವದಲ್ಲಿ ಒಳ ಮೀಸಲಾತಿ ಕಮಿಟಿ ಮಾಡಿದ್ದಾರೆ, ಇದಕ್ಕೆ ಸಿಎಂಗೆ ಅಭಿನಂದನೆ‌ ಸಲ್ಲಿಸುತ್ತೇನೆ.ಆ ಜನಾಂಗಕ್ಕೆ ನ್ಯಾಯ ಕೊಡುವ ಕೆಲಸ ನಮ್ಮ‌ಸರ್ಕಾರ ಮಾಡ್ತಿದೆ.ಆದ್ರೆ ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದ್ದಾರೆ.ಸಿದ್ದರಾಮಯ್ಯ ನವರಿಗೆ ಪ್ರಾಮಾಣಿಕ ಕಳಕಳಿ ಇಲ್ಲ.ಸಿದ್ದರಾಮಯ್ಯ ನವರನ್ನ ಕೇಳ್ತೇನೆ ನಾವು ಕಣ್ಣೀರೊರೆಸುವ ಕೆಲಸನಾದ್ರು ಮಾಡ್ತಿದ್ದೇವೆ.ಇಷ್ಟು ವರ್ಷ ನೀವೇನು ಮಾಡ್ತಿದ್ದೀರಿ, ಅವರನ್ನು ಮೂಲೆಗುಂಪು ಮಾಡಿದವರು ನೀವು.ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುವವರು ನೀವು,ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನ ಮಾಡ್ತು .ಅಂತವರು ದಲಿತರ ಬಗ್ಗೆ, ಅಂಬೇಡ್ಕರ್ ಬಗ್ಗೆ ಮೊಸಳೆ ಕಣ್ಣೀರು ಸುರಿಸ್ತಿದ್ದಾರೆ.ಆ ಜನಾಂಗಕ್ಕೆ ಅರ್ಥ ಆಗಿದೆ ಕಾಂಗ್ರೆಸ್ ನವರು ಬೊಗಳೆ ಬಿಡ್ತಿದ್ದಾರೆ, ಕೆಲಸ ಮಾಡಲ್ಲ.ಬಿಜೆಪಿ ದಲಿತರ ಪರವಾದ ಪಕ್ಷ ಎಂಬುದು ಅರ್ಥವಾಗಿದೆ, ದಲಿತರಿಗೆ ಬಿಜೆಪಿ ಬಗ್ಗೆ ವಿಶ್ವಾಸ ಮೂಡುತ್ತಿದೆ.
 
ಒಳಮೀಸಲಾತಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂಬ ವಿಚಾರವಾಗಿ ಕಮಿಟಿ ಆದಮೇಲೆ ಅಸೆಂಬ್ಲಿ ಗೆ ಬರಲೇಬೇಕು, ಬಂದೇ ಬರುತ್ತದೆ.ಅಷ್ಟಾದ್ರು ಕಾಮನ್ ಸೆನ್ಸ್ ಇರಬೇಕಲ್ವಾ‌ ಕಾಂಗ್ರೆಸ್ ನವರಿಗೆ ಯಾವುದೇ ಬಿಲ್ ಪಾಸ್ ಮಾಡಬೇಕಾದ್ರು ಕ್ಯಾಬಿನೆಟ್ ನಲ್ಲಿಟ್ಟು ಆಮೇಲೆ ಅಸೆಂಬ್ಲಿ ಗೆ ತರೋದು ಕಾಂಗ್ರೆಸ್ ನವರಿಗೆ ದಲಿತರ ಓಟ್ ಬೇಕು ಅಷ್ಟೇ ಏನೂ ಕೆಲಸ ಮಾಡಲ್ಲ.ಇಷ್ಟು ವರ್ಷ ಅಧಿಕಾರದಲ್ಲಿದ್ರಲ್ಲಾ ಅವರ್ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ.ನಾವು ಮಾಡಿರೋದಕ್ಕೆ ಕಾಂಗ್ರೆಸ್ ನವರಿಗೆ ಹೊಟ್ಟೆಯಲ್ಲಿ ಹಸಿಮೆಣಸಿನಕಾಯಿ ಹಿಸುಕಿದಂತೆ ಆಗಿದೆ.ದಲಿತರು ಕಾಂಗ್ರೆಸ್ ಜೊತೆ ಇಲ್ಲ ಅನ್ನೋ ಸಂದೇಶ ಅವರಿಗೆ ಹೋಗಿದೆ ಎಂದು ಸಚಿವ ಆರ್ ಅಶೋಕ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಶಬರಿಮಲೆಯಲ್ಲಿ ಭಕ್ತರಿಗೆ ತೊಂದರೆ, ಕೇರಳ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಅಣ್ಣಾಮಲೈ

ಜೆಡಿಎಸ್‌ನಲ್ಲಿಯೇ ಇರುತ್ತಿದ್ದರೆ ದೇವೇಗೌಡ, ಅವರ ಮಕ್ಕಳು ಸಿಎಂ ಆಗಕ್ಕೆ ಬಿಡ್ತಿರ್ಲಿಲ್ಲ: ಸಿದ್ದರಾಮಯ್ಯ

ದೆಹಲಿ ವಿಮಾನವೇರಿದ ಡಿಕೆಶಿ, ಶಾಸಕರನ್ನು ಇಲ್ಲೇ ಕಟ್ಟಿಹಾಕಲು ಸಿಎಂ ಮಾಸ್ಟರ್ ಪ್ಲಾನ್‌

ದೆಹಲಿ, ಶಿಕ್ಷಕರ ಇದೇ ನಡವಳಿಕೆಯಿಂದ ಮಗ ಪ್ರಾಣ ಕಳೆದುಕೊಂಡ

ಮುಂದಿನ ಸುದ್ದಿ
Show comments