Daily Horoscope

Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಕಾರ್ಯಕರ್ತರಿಗೆ ಸರಕಾರಿ ಹಣ ಹಂಚುವ ಹೀನ ಕಾರ್ಯ: ಆರ್.ಅಶೋಕ್ ಟೀಕೆ

R Ashoka
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಜನರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸರಕಾರಿ ಹಣ ಹಂಚುವ ವ್ಯವಸ್ಥೆ ಮಾಡುವುದು ಹೀನ ಕಾರ್ಯ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ಟೀಕಿಸಿದ್ದಾರೆ.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಬೆಂಗಳೂರಿನಲ್ಲೂ ಪ್ರತಿ ವಾರ್ಡಿಗೆ ಭಾರತ್ ಜೋಡೋ ಹೆಸರಿನಲ್ಲಿ 10 ಲಕ್ಷದಂತೆ ನೀಡುತ್ತಿದ್ದಾರೆ. ರಾಜ್ಯದಲ್ಲೂ ಹಣ ಕೊಡಲಾಗುತ್ತಿದೆ. ಭಾರತ್ ಜೋಡೋ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಅವರೇನೋ ಪಾಕಿಸ್ತಾನ ಜೋಡೋ ಮಾಡಿದ್ದರೆ ಅವರಿಗೆ ಉಪಯೋಗ ಆಗುತ್ತಿತ್ತು ಎಂದು ನುಡಿದರು.
 
ಭಾರತ್ ಜೋಡೋದಲ್ಲಿ ಒಬ್ಬರೇ ಒಬ್ಬರು ಬಿಜೆಪಿ, ಜೆಡಿಎಸ್‍ನವರು ಇರಬಾರದೆಂದು ಸಚಿವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಇರಬೇಕೆಂದು ಆದೇಶ ಮಾಡಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದವರಿಗೆ ಹಣ ಹಂಚುತ್ತಿದ್ದಾರೆ. ಭಾರತ್ ಜೋಡೋ ಹೆಸರಿನಲ್ಲಿ ವಾರ್ಡ್, ಜಿಲ್ಲಾ ಪಂಚಾಯಿತಿಗೆ ಹಣ ಹಂಚುತ್ತಾರೆ. ರೈತರಿಗೆ ನೀಡಲು ಇವರ ಬಳಿ ಹಣ ಇಲ್ಲ. ಬೆಂಗಳೂರಿನಲ್ಲಿ ಕಸದ ವಿಲೇವಾರಿಗೆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದೇ 5 ತಿಂಗಳಾಗಿದೆ ಎಂದು ದೂರಿದರು.
 
ಆಶಾ ಕಾರ್ಯಕರ್ತೆಯರು ಚಳಿಯಲ್ಲೂ ಪ್ರತಿಭಟನೆ ನಡೆಸಿ ಕಾಯಿಲೆಗೆ ಸಿಲುಕಿದ್ದಾರೆ. ಆದರೆ ಹಣ ಕೊಡುತ್ತಿಲ್ಲ. ಕೆಲಸ ಮಾಡುವವರಿಗೆ, ಜನಸೇವೆ ಮಾಡುವವರಿಗೆ ಹಣ ಇಲ್ಲ. ಭಾರತ್ ಜೋಡೋ ಕಾರ್ಯಕರ್ತರಿಗೆ ತಕ್ಷಣ ಹಣ ನೀಡುತ್ತಾರೆ ಎಂದು ಆಕ್ಷೇಪಿಸಿದರು. 
 
ರಾಜ್ಯ ಸರಕಾರವು ಜನರ ತೆರಿಗೆ ದುಡ್ಡನ್ನು ಈ ರೀತಿ ಪೋಲು ಮಾಡುವುದು ರಾಜ್ಯಕ್ಕೆ ಬಗೆದ ದ್ರೋಹ ಎಂದು ಟೀಕಿಸಿದರು. ಇದೀಗ ಕಾಂಗ್ರೆಸ್ಸಿನ ನಿಜವಾದ ಮುಖವಾಡ ಕಳಚಿ ಬಿದ್ದಿದೆÉ. ಬೆಲೆ ಏರಿಕೆ ವಿರುದ್ಧ ಇದೇ 23, 24, 25ರಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಹೋರಾಟ ನಡೆಯಲಿದೆ ಎಂದು ಹೇಳಿದರು. 26ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ ಸಂಘಟಿಸಲಾಗುವುದು ಎಂದು ಹೇಳಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ವಿಚ್ಛೇದನದ ಹೊಸ್ತಿಲಲ್ಲಿ ಪ್ರೀತಿಯ ಗೆಲುವು: ಸಹಿ ಹಾಕುವ ಮುನ್ನ ಪತಿಯ ಕಡೆ ನೋಡಿ ಓಡಿದ ಯುವತಿ, ವೈರಲ್ ವಿಡಿಯೋ