Daily Horoscope
✕

ನಾವು ಅಧಿಕಾರದಲ್ಲಿದ್ದಾಗ ಕಿವಿಗೆ ಹೂ ಇಟ್ಕೊಂಡು ಕೂತಿರಲಿಲ್ವಾ: ಡಿಕೆಶಿಗೆ ಆರ್ ಅಶೋಕ್ ಕೌಂಟರ್

Krishnaveni K
ಬುಧವಾರ, 11 ಮಾರ್ಚ್ 2026 (14:15 IST)
ಬೆಂಗಳೂರು: ಬಜೆಟ್ ಬಳಿಕ ನಾವು ಚೊಂಬು ಹಿಡಿದು ಪ್ರತಿಭಟನೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೀದ್ದೀರಿ. ನಾವು ಅಧಿಕಾರದಲ್ಲಿದ್ದಾಗ ನೀವು ಕಿವಿಗೆ ಹೂ ಇಟ್ಕೊಂದು ಕೂರಲಿಲ್ವಾ ಎಂದು ಡಿಕೆ ಶಿವಕುಮಾರ್ ಗೆ ವಿಪಕ್ಷ ನಾಯಕ ಆರ್ ಅಶೋಕ್ ಕೌಂಟರ್ ಕೊಟ್ಟಿದ್ದಾರೆ.


ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ ಬಳಿಕ ಬಿಜೆಪಿ ವಿಧಾನಸೌಧದ ಹೊರಗೆ ಖಾಲಿ ಚೊಂಬು ಹಿಡಿದು ಪ್ರತಿಭಟನೆ ಮಾಡಿತ್ತು. ಇದೇ ವಿಚಾರವಾಗಿ ಇದೀಗ ಸದನದಲ್ಲಿ ಪ್ರಸ್ತಾಪಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಇದಕ್ಕೀಗ ಕೌಂಟರ್ ಕೊಟ್ಟಿರುವ ಆರ್ ಅಶೋಕ್ ‘ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷದ ಶಾಸಕರು ಸಾಂಕೇತಿಕವಾಗಿ ಖಾಲಿ ಚೊಂಬು ತಂದು ಪ್ರತಿಭಟನೆ ಮಾಡಿದ್ದಕ್ಕೆ ನಿನ್ನೆ ಸದನದಲ್ಲಿ ಮಹಾನ್ ಸತ್ಯಹರಿಶ್ಚಂದ್ರನ ರೀತಿ ಆಕ್ಷೇಪಣೆ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ಏನು ಮಾಡಿತ್ತು ಎಂಬುದನ್ನ ಮರೆತಂತಿದೆ.

ಡಿ.ಕೆ.ಶಿವಕುಮಾರ್ ಅವರೇ, ನಾವು ಬಜೆಟ್ ಮಂಡನೆ ಆದ ನಂತರ ಚೊಂಬು ಹಿಡಿದು ಪ್ರತಿಭಟನೆ ಮಾಡಿದೆವು. ಆದರೆ, 2023ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸುವಾಗಲೇ ಇಡೀ ಕಾಂಗ್ರೆಸ್ ಪಕ್ಷದ ಶಾಸಕರು ಕಿವಿಯ ಮೇಲೆ ಹೂವಿಟ್ಟುಕೊಂಡು ಸದನದಲ್ಲಿ ಕೂತಿದ್ದನ್ನ ಕರ್ನಾಟಕದ ಜನತೆ ಮರೆತಿಲ್ಲ. ಸಭ್ಯತೆ, ಶಿಷ್ಟಾಚಾರ, ನೈತಿಕತೆ ಬಗ್ಗೆ ತಮ್ಮಿಂದ ನಾವು ಪಾಠ ಕಲಿಯಬೇಕಾಗಿಲ್ಲ ಸ್ವಾಮಿ.

ನೀವು ಅಧಿಕಾರಕ್ಕೆ ಬಂದಿರುವುದೇ ಸುಳ್ಳು, ಅಪಪ್ರಚಾರ, ತೇಜೋವಧೆಯ ಆಧಾರದ ಮೇಲೆ. ಬಜೆಟ್ ಮಾತ್ರವಲ್ಲ, ತಮ್ಮ ಇಡೀ ಕಾಂಗ್ರೆಸ್ ಸರ್ಕಾರ ನಡೆಯುತ್ತಿರುವುದೇ ಸುಳ್ಳಿನ ಕಂತೆಯ ಮೇಲೆ. ಕರ್ನಾಟಕದ ಪ್ರಜ್ಞಾವಂತ ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಸ್ವಾಮಿ. ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಅಂತ್ಯ ಸಮೀಪಿಸುತ್ತಿದೆ. ಇದು ಗ್ಯಾರೆಂಟಿ. ಬರೆದಿಟ್ಟುಕೊಳ್ಳಿ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments