Publish Date: Wed, 25 Jan 2023 (11:34 IST)
Updated Date: Wed, 25 Jan 2023 (09:35 IST)
ಬೆಂಗಳೂರು : ನಾನು ಇರೋದಾದ್ರೆ ಭಾರತದಲ್ಲಿಯೇ ಇರ್ತೀನಿ. ಗಂಡನ ಜೊತೆಯಲ್ಲಿಯೇ ಸಾಯ್ತೀನಿ. ಹೀಗಂತ ಪಾಕಿಸ್ತಾನದ ಮಹಿಳೆ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.
ನಾನು ಪ್ರೀತಿಸಿ ಪ್ರೀತಿಗಾಗಿ ಅಲ್ಲಿಂದ ಬಂದಿದ್ದೇನೆ ನಾನು ಆತನನ್ನು ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾಳೆ.
ಪ್ರೀತಿಗಾಗಿ ದೇಶವನ್ನೇ ಬಿಟ್ಟು ಬಂದು ಭಾರತದ ಪ್ರಜೆಯನ್ನು ಮದುವೆಯಾಗಿರೋ ಪಾಕಿಸ್ತಾನದ ಮಹಿಳೆ ಮತ್ತೊಂದು ವರಸೆ ತೆಗೆದಿದ್ದಾಳೆ. ನಾನು ಪ್ರೀತಿಸಿ ಅಲ್ಲಿಂದ ಬಂದಿದ್ದೀನಿ ತವರಿಗೆ ಹೋಗಲು ಒಲ್ಲೆ ಎನ್ನುತ್ತಿದ್ದಾಳಂತೆ ಇಕ್ರಾ ಜಿವಾನಿ.
ಇಲ್ಲಿಯೇ ಇರುತ್ತೇನೆ ಅಂತೀರೋ ಪಾಕ್ ಯುವತಿ ಹೇಳಿದ್ದು, ನಾನು ಪಾಕಿಸ್ತಾನಕ್ಕೆ ಹೋಗಲ್ಲ, ನಾವಿಬ್ಬರು ಮದುವೆಯಾಗಿದ್ದೀವಿ. ಮುಲಾಯಂ ಸಿಂಗ್ ಯಾದವ್ ಬಿಟ್ಟು ಹೋಗಲ್ಲ ಎಂದು ಯುವತಿ ಪಟ್ಟು ಹಿಡಿದಿದ್ದಾಳಂತೆ ಯುವತಿ ವರಸೆಯಿಂದ ಪೊಲೀಸರಿಗೆ ಹೊಸ ತಲೆಬಿಸಿಯಾಗಿದೆ.