Publish Date: Thu, 25 Jun 2026 (21:03 IST)
Updated Date: Thu, 25 Jun 2026 (21:04 IST)
ಬೆಂಗಳೂರು: ಈಚೆಗೆ ಪೀಕ್ ಅವರ್‌ನಲ್ಲಿ ಮೆಟ್ರೋ ಕೆಟ್ಟು ನಿಂತು ಪ್ರಯಾಣಿಕರು ಪರದಾಡಿದ ಬೆನ್ನಲ್ಲೇ ಇದೀಗ ಇಂದು ಮತ್ತೇ ಅದೇ ಮಾರ್ಗದಲ್ಲಿ ಮೆಟ್ರೊ ಸಂಚಾರ ಸ್ಥಗಿತಗೊಂಡಿದೆ. ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಮೆಟ್ರೊ ರೈಲಿನ ಬಾಗಿಲು ಮುಚ್ಚಲು ಆಗದ ಕಾರಣ ಈ ಸಮಸ್ಯೆ ಉಂಟಾಗಿದೆ.
ಗುರುವಾರ ರಾತ್ರಿ 7.45ರ ಸುಮಾರಿಗೆ ಮೆಟ್ರೊ ರೈಲು ಬಂದಿದೆ. ರೈಲಿನ ಬಾಗಿಲು ತೆರೆದ ಬಳಿಕ ಪ್ರಯಾಣಿಕರು ಇಳಿಯುವುದು, ಹತ್ತುವುದು ಆದ ಬಳಿಕ ಬಾಗಿಲು ಮುಚ್ಚಲು ಆಗಿಲ್ಲ.
ಇನ್ನೂ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ರೈಲಿನಲ್ಲಿದ್ದ ಪ್ರಯಾಣಿಕರನ್ನು ಇಳಿಸಲಾಗಿದೆ. ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಸರಿಪಡಿಸುತ್ತಿವೆ. ಕೆಲವೇ ಸಮಯದಲ್ಲಿ ಸರಿಯಾಗಲಿದೆ. ಅಲ್ಲಿವರೆಗೆ ಮೆಟ್ರೊ ಸಂಚಾರ ಇರುವುದಿಲ್ಲ. ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಇದೇ ಮಾರ್ಗದಲ್ಲಿ ಕಬ್ಬನ್ ಪಾರ್ಕ್ ನಿಲ್ದಾಣದ ಬಳಿಯೇ ಧರ್ಡ್ ರೈಲ್ ಮತ್ತು ಕರೆಂಟ್ ಕಲೆಕ್ಟರ್ ಡಿವೈಸ್ ಸಮಸ್ಯೆಯಾಗಿ ಮೆಟ್ರೊ ಸಂಚಾರವೇ ನಿಂತು ಹೋಗಿ ಪ್ರಯಾಣಿಕರು ಪರದಾಡುವಂತಾಗಿತ್ತು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ