ಪಂಜಾಬ್ ನಂತ್ರ ಇದೀಗ ಛತ್ತೀಸ್ ಗಢದಲ್ಲಿ ಸಿಎಂ ಬದಲಾವಣೆ ಆಗುತ್ತಾರೆ ಅನ್ನೋ ಗುಮಾನಿ ಹರಡಿದೆ.. ಇದರ ಬೆನ್ನಲ್ಲೇ ಅಲ್ಲಿನ 12ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಭೇಟಿ ನೀಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.. ಈ ಹಿನ್ನೆಲೆ ಛತ್ತೀಸ್ ಗಢದಲ್ಲಿ ರಾಜಕೀಯ ಕೆಸರೆರಚಾಟ ಪ್ರಾರಂಭವಾಗಿದೆ ಎನ್ನಲಾಗಿದೆ.. ಕಾಂಗ್ರೆಸ್ ಶಾಸಕರು ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕೂತುಹಲ ಮೂಡಿಸಿದೆ.. ಶಾಸಕರ ಈ ಭೇಟಿ ಸಿಎಂ ಭೂಪೇಶ್ ಬಘೇಲ್ ಅವರ
ನ್ನು ಬೆಂಬಲಿಸುವ ನಿರ್ಧಾರವಾಗಿದ್ದು ಇದನ್ನ ಹೈಕಮಾಂಡ್ಗೆ ತಲುಪಿಸುವುದಕ್ಕಾಗಿ ಎನ್ನಲಾಗಿದೆ.. ಆದ್ರೆ ಶಾಸಕರು ತಾವು ದೆಹಲಿಗೆ ಬಂದಿರುವುದು ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ವಿಷಯದ ಬಗ್ಗೆ ಚರ್ಚಿಸುವುದಕ್ಕಾಗಿ ಎನ್ನುತ್ತಿದ್ದಾರೆ.. ಇನ್ನು ಛತ್ತೀಸ್ ಗಢದ 15 ರಿಂದ16 ಶಾಸಕರು ನಿನ್ನೆ ರಾತ್ರಿ ದೆಹಲಿಗೆ ಆಗಮಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ವಾಸ್ಯವ್ಯ ಹೂಡಿದ್ದಾರೆ.. ಶಾಸಕರು ರಾಜ್ಯ ಉಸ್ತುವಾರಿ ಪಿ.ಎಲ್. ಪುನಿಯಾ ಅವರನ್ನು ಭೇಟಿ ಮಾಡಲಿದ್ದು ಎಲ್ಲಾ ಶಾಸಕರಿಗೂ ಉಪಯೋಗವಾಗುವಂತೆ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ವೇಳಾಪಟ್ಟಿಯನ್ನು ವಿಸ್ತರಿಸಲು ಮನವಿ ಮಾಡಲಿದ್ದಾರೆ ಎಂದು ರಾಮಾನುಜ್ ಗಂಜ್ನ ಶಾಸಕ ಬೃಹಸ್ಪತ್ ಸಿಂಗ್ ತಿಳಿಸಿದ್ದಾರೆ.. ಅಲ್ಲದೇ ವಿಷಯವನ್ನು ಮಾತನಾಡುವುದಕ್ಕಾಗಿ ನಾವು ದೆಹಲಿಗೆ ಬಂದಿದ್ದೇವೆ.. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದ್ರು.. ಹಾಗೂ ವಿಧಾನಸಭೆಯಲ್ಲಿ 90 ಶಾಸಕರಿದ್ದು ಅವರಲ್ಲಿ ನಮ್ಮ ಪಕ್ಷದಲ್ಲಿ 70 ಶಾಸಕರಿದ್ದಾರೆ.. ಅಲ್ಲದೇ ಸಿಎಂ ಉತ್ತಮವಾಗಿ ಕೆಲಸ ನಿಭಾಯಿಸುತ್ತಿದ್ದಾರೆ.. ಹೈಕಮಾಂಡ್ ಸೂಚನೆಯಲ್ಲಿ ಮತ್ತು ಶಾಸಕರ ಬೆಂಬಲವಿದೆ.. ಸಿಎಂ ಬದಲಾವಣೆಯಾಗುವುದಿಲ್ಲ ಎಂದು ಬೃಹಸ್ಪತ್ ಸಿಂಗ್ ತಿಳಿಸಿದ್ರು.