Publish Date: Mon, 18 Apr 2022 (18:36 IST)
Updated Date: Mon, 18 Apr 2022 (18:41 IST)
545 PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಇದುವರೆಗೆ 7 ಮಂದಿಯನ್ನ ಬಂಧಿಸಲಾಗಿದೆ. ನಾಲ್ವರು ಅಭ್ಯರ್ಥಿಗಳು, ಮೂವರು ಮೇಲ್ವಿಚಾರಕರು ಅರೆಸ್ಟ್ ಆಗಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರನ್ನೂ ಅರೆಸ್ಟ್ ಮಾಡಲಾಗುತ್ತದೆ ಎಂದು DG-IGP ಪ್ರವೀಣ್ ಸೂದ್ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. DG-IGP ಪ್ರವೀಣ್ ಸೂದ್, ಅಭ್ಯರ್ಥಿ ಆಯ್ಕೆ ಪರಿಶೀಲಿಸುವಂತೆ ಗೃಹ ಸಚಿವರು ಸೂಚಿಸಿದ್ದಾರೆ. ಆಯ್ಕೆಯಾದ ಪ್ರತಿಯೊಬ್ಬರ ವಿಚಾರಣೆ ನಡೆಯಲಿದೆ, ವಿಚಾರಣೆ ಬಳಿಕವಷ್ಟೇ ನೇಮಕಾತಿ ಫಲಿತಾಂಶ ಅಂತಿಮವಾಗುತ್ತೆ. ಅಕ್ರಮ ಮಾಡಿದ ಸಿಬ್ಬಂದಿಗಳಿಗೆ ತಕ್ಕ ಶಿಕ್ಷೆಯಾಗುತ್ತೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ರಕ್ಷಣೆ ಇರುತ್ತೆ. ಇಲಾಖೆಯ ಉಳಿದ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ತಿಳಿಸಿದ್ದಾರೆ.