Select Your Language

Notifications

webdunia
webdunia
webdunia
webdunia

'ಅರಕಲಗೂಡು ಕ್ಯಾಂಡಿಡೇಟ್ ಅಲ್ಲ'

'ಅರಕಲಗೂಡು ಕ್ಯಾಂಡಿಡೇಟ್ ಅಲ್ಲ'
bangalore , ಸೋಮವಾರ, 18 ಏಪ್ರಿಲ್ 2022 (18:28 IST)
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹ ಎದ್ದಿದ್ದು, ಇದಕ್ಕೆ ಸಿದ್ದರಾಮಯ್ಯ ಇಂದು ತೆರೆ ಎಳೆದಿದ್ದಾರೆ., ನಾನು ಇಲ್ಲಿಯ ಕ್ಯಾಂಡಿಡೇಟ್ ಅಲ್ಲ. ನಾನು ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಇದಕ್ಕಿಂತ ಸ್ಪೆಸಿಫಿಕ್ಕಾಗಿ ಏನು ಹೇಳಲಿ ಎಂದು ಜನರ ಊಹೆಯನ್ನು ಅಲ್ಲಗಳೆದಿದ್ದಾರೆ. ಇದೇ ವೇಳೆ, ನನಗೆ ಇರುವ ಮಾಹಿತಿ ಪ್ರಕಾರ ಅವಧಿಗೂ ಮೊದಲು ಚುನಾವಣೆ ನಡೆಯಲ್ಲ. 2023ರ ಏಪ್ರಿಲ್, ಮೇ ತಿಂಗಳಿನಲ್ಲೇ ಚುನಾವಣೆ ನಡೆಯುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಸರ್ವೇ ನಡೆಸುತ್ತೇವೆ. ಯಾರು ಗೆಲ್ಲುತ್ತಾರೋ, ಜನಾಭಿಪ್ರಾಯ ಯಾರ ಪರವಾಗಿರುತ್ತದೆಯೋ ಅವರಿಗೇ ಟಿಕೆಟ್ ಕೊಡಿಸುತ್ತೇವೆ ಎಂದಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

‘ಪರ್ಸೆಂಟೇಜ್ ಪಿತಾಮಹ ಸಿದ್ದರಾಮಯ್ಯ'