Select Your Language

Notifications

webdunia
webdunia
webdunia
webdunia

ಪುನೀತ್ ರಾಜಕುಮಾರ್ ಗ್ಯಾಲ್ಲೆರಿ ಬೆಂಗಳೂರಿನಲ್ಲಿ

ಪುನೀತ್ ರಾಜಕುಮಾರ್ ಗ್ಯಾಲ್ಲೆರಿ ಬೆಂಗಳೂರಿನಲ್ಲಿ
ಬೆಂಗಳೂರು , ಭಾನುವಾರ, 3 ಏಪ್ರಿಲ್ 2022 (15:33 IST)
ರಾಜಾಜಿನಗರದ ಬಿನ್ನಿಮಿಲ್ ಮೈದಾನದಲ್ಲಿ ವಸ್ತುಪ್ರದರ್ಶನ ಹಾಗೂ ಅಪರೂಪದ ವೈಜ್ಞಾನಿಕ ಪ್ರದರ್ಶನದಲ್ಲಿ ಪುನೀತ್ ರಾಜ್‍ಕುಮಾರ್ ಸೆಲ್ಫಿ ಗ್ಯಾಲರಿ ಸೃಷ್ಟಿಸಲಾಗಿದೆ.
ಅಪ್ಪು ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಹಂಬಲ ಈಡೇರಿಸಿಕೊಳ್ಳಲು ಸುವರ್ಣ ಅವಕಾಶ ನೀಡಲಾಗಿದೆ.
 
ಇದರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‍ವುಡ್‍ನ ಸೂಪರ್ ಸ್ಟಾರ್‍ಗಳೊಂದಿಗೆ ಅವಿಸ್ಮರಣೀಯ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಡಲು ವೇದಿಕೆ ಸಿದ್ದವಾಗಿದೆ.
 
ನಾಳೆ ಸಂಜೆ 5.30ಕ್ಕೆ ಪ್ರದರ್ಶನ ಆರಂಭಗೊಳ್ಳಲಿದ್ದು, ಜಗತ್ತಿನ ನಾನಾ ಹಕ್ಕಿಗಳ ಕಲರವ ಎಲ್ಲೆಡೆ ಬುಡಕಟ್ಟು ಜನರ ಸದ್ದು ಸಂಸ್ಕøತಿ ಬಿಂಬಿಸುವ ಕಾಡು ಪ್ರಾಣಿಪಕ್ಷಗಳ ಪ್ರದರ್ಶನವಿದೆ.
 
ವಿದ್ಯಾರ್ಥಿಗಳಿಗೆ ಸೂಕ್ತ ವಸ್ತುಪ್ರದರ್ಶನ ಇದಾಗಿದ್ದು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು, ನಮ್ಮ ಶಿಲಾಯುಗ, ಕಾಡುಜನಗರ ಬದುಕು ಅಧ್ಯಯನಕ್ಕೆ ಪೂರಕವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೈಸ್ ಸಂಸ್ಥೆ ವಿರುದ್ಧ ದೇವೇಗೌಡರು ಗರಂ