Select Your Language

Notifications

webdunia
webdunia
webdunia
webdunia

ಪಿಯುಸಿ ಫಲಿತಾಂಶ ‌ಪ್ರಕಟ‌: ಗುಡ್ ಲಕ್ ಹೇಳಿದ ಸಚಿವ

ಪಿಯುಸಿ ಫಲಿತಾಂಶ
ಬೆಳಗಾವಿ , ಮಂಗಳವಾರ, 14 ಜುಲೈ 2020 (12:44 IST)
ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳಿಗೆ ಸಚಿವರೊಬ್ಬರು ಗುಡ್ ಲಕ್ ಹೇಳಿದ್ದಾರೆ.

 ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ನನ್ನ ಶುಭಹಾರೈಕೆಗಳು. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

ಫಲಿತಾಂಶದಲ್ಲಿ ಹಿನ್ನಡೆಯಾದ ವಿದ್ಯಾರ್ಥಿಗಳು ಧೈರ್ಯ ಮತ್ತು ವಿಶ್ವಾಸ ಕಳೆದುಕೊಳ್ಳದೆ, ಹಿನ್ನಡೆಯನ್ನು ಸವಾಲಾಗಿ ಸ್ವೀಕರಿಸಿ, ಚೆನ್ನಾಗಿ ಓದಿ ತೇರ್ಗಡೆಯಾಗಿ. ತಂದೆ ತಾಯಿಗೆ ಹೆಮ್ಮೆ, ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಿ. ಈ ಫಲಿತಾಂಶವೇ
ಜೀವನವನ್ನು ನಿರ್ಧರಿಸದು. ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಸಕಾರಾತ್ಮಕತೆ ಇರಲಿ. ವಿದ್ಯಾರ್ಥಿಗಳಿಗೆ ಶುಭವಾಗಲಿ.

ಹೀಗಂತ ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಟಾಸ್ಕ್ ಫೋರ್ಸ್ ಸಭೆಯಲ್ಲಿ ಅಧಿಕಾರಿಗಳ ಮೇಲೆ ಫುಲ್ ಗರಂ ಆದ ಸಿಎಂ. ಕಾರಣವೇನು ಗೊತ್ತಾ?