Select Your Language

Notifications

webdunia
webdunia
webdunia
webdunia

ಆರ್ ಎಸ್ಎಸ್ ಗೆ ಮಾತ್ರ ಯಾಕೆ ರಾಜಕೀಯ ಪಕ್ಷಗಳಿಗೂ ರೋಡ್ ಶೋಗೆ ನಿಷೇಧಿಸಬೇಕು: ಸಿಎಂಗೆ ನೆಟ್ಟಿಗರ ಅಗ್ರಹ

Siddaramaiah
ಬೆಂಗಳೂರು: ಆರ್ ಎಸ್ಎಸ್ ಗೆ ಮಾತ್ರ ಯಾಕೆ, ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷಗಳೂ ಸರ್ಕಾರಿ ಜಾಗದಲ್ಲಿ ರೋಡ್ ಶೋ, ಸಮಾವೇಶ ನಡೆಸುವುದನ್ನು ನಿಷೇಧಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮಾಡಿದ ಟ್ವೀಟ್ ಒಂದಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಸರ್ಕಾರಿ ಸ್ಥಳಗಳಲ್ಲಿ ಆರ್.ಎಸ್.ಎಸ್ ಚಟುವಟಿಕೆಗಳನ್ನು ಕೈಗೊಳ್ಳಬಾರದು. ತಮಿಳುನಾಡು ಮಾದರಿಯಲ್ಲಿ ಇಲ್ಲಿಯೂ ನಿಷೇಧ ಮಾಡಬೇಕು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನನಗೆ ಪತ್ರ ಬರೆದಿದ್ದಾರೆ. ಅದರಲ್ಲಿ ತಪ್ಪೇನಿದೆ? ಇಂತಹ ಬೆದರಿಕೆಗಳಿಗೆ ಯಾರೂ ಹೆದರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಹಾಗಿದ್ದರೆ ಇನ್ನು ಮುಂದೆ ಆರ್ ಎಸ್ಎಸ್ ಮಾತ್ರವಲ್ಲ, ಅನ್ಯಧರ್ಮದ ಸಂಘಟನೆಗಳು, ರಾಜಕೀಯ ಪಕ್ಷಗಳಿಗೂ ಸಾರ್ವಜನಿಕ ಸ್ಥಳಗಳಲ್ಲಿ ರೋಡ್ ಶೋ, ಸಮಾವೇಶ ಮಾಡುವುದನ್ನು ನಿಷೇಧಿಸಬೇಕು. ನಿಮ್ಮ ಪಕ್ಷದ ಕೆಲಸಗಳೇನೇ ಇದ್ದರೂ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ. ಸಾರ್ವಜನಿಕ ಸ್ಥಳಗಳಲ್ಲಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು, ಕೆಲವರು ನೀವು ರಾಜ್ಯದ ಮುಖ್ಯಮಂತ್ರಿ. ಒಂದು ವೇಳೆ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದರೆ ಅವರು ಯಾರು ಎಂದು ಪತ್ತೆ ಮಾಡಿ ಕ್ರಮ ಕೈಗೊಳ್ಳಿ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಮೊದಲು ಗುಂಡಿ ಮುಚ್ಚುವ ಕೆಲಸ ಮಾಡಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನನಗೆ ಡಿಸಿಎಂ ಆಫರ್ ಕೊಟ್ಟಿತ್ತು, ಆದ್ರೆ ನಾನು ಜೈಲು ಆಯ್ಕೆ ಮಾಡಿಕೊಂಡೆ: ಡಿಕೆ ಶಿವಕುಮಾರ್