Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಸುಳ್ಳಿನ ಸರದಾರವೆಂಬುದು ಸಾಬೀತು– ಹರಿಪ್ರಸಾದ್

ನರೇಂದ್ರ ಮೋದಿ ಸುಳ್ಳಿನ ಸರದಾರವೆಂಬುದು ಸಾಬೀತು– ಹರಿಪ್ರಸಾದ್
ಅಥಣಿ , ಶನಿವಾರ, 24 ಫೆಬ್ರವರಿ 2018 (18:06 IST)
ಭ್ರಷ್ಟಾಚಾರ ತಡೆಯುತ್ತೇವೆ, ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದ ನರೇಂದ್ರ ಮೋದಿ ಅವರು ಸುಳ್ಳಿನ ಸರದಾರ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಅಥಣಿಯಲ್ಲಿ ನಡೆದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷಗಳು
ಆಡಳಿತ ನಡೆಸಿರುವ ನರೇಂದ್ರ ಮೋದಿ ಅವರು ಬಹಳಷ್ಟು ಆಶ್ವಾಸನೆಗಳನ್ನು ಕೊಡುತ್ತಾ ಇದ್ದಾರೆ. ಅವರಿಗೆ ಆಶ್ವಾಸನೆ ಕೊಡುವುದು ಅಷ್ಟೇ ಗೊತ್ತು, ಯಾವುದೇ ಭರವಸೆ ಈಡೇರಿಸಿಲ್ಲ ಎಂದು ತಿಳಿಸಿದ್ದಾರೆ.

ಬಡವರ ಪರವಾಗಿ ಕೆಲಸ ಮಾಡಿದವರನ್ನು ಎಲ್ಲರೂ ಬೆಂಬಲಿಸಬೇಕು ಎಂದ ಅವರು ರೈತರು, ಯುವಕರು, ಮಹಿಳೆಯರು ಹಾಗೂ ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿಗೆ ಹೋಗಲು ಬಿಜೆಪಿ ಬರಬೇಕಾ– ಮಲ್ಲಿಕಾರ್ಜುನ ಖರ್ಗೆ