Publish Date: Sat, 24 Feb 2018 (17:57 IST)
Updated Date: Sat, 24 Feb 2018 (17:59 IST)
ರಾಜ್ಯ ಸರ್ಕಾರವನ್ನು ಶೇ 10ರ ಕಮಿಷನ್‌ನ ಸರ್ಕಾರ ಅಂತಾರೆ, ಆದರೆ, ಕೇಂದ್ರ ಸರ್ಕಾರ 99 ಪರ್ಸೆಂಟ್‌ನ ಸರ್ಕಾರ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅಥಣಿಯಲ್ಲಿ ನಡೆದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಕರ್ನಾಟದಲ್ಲಿ ಆಗಿರುವು ಪ‌್ರಗತಿಯನ್ನು ಸಹಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ ಎಂದಿದ್ದಾರೆ.
ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರದ್ದು ಮಾತನಾಡಿದ್ದೇ ಸಾಧನೆಯಾಗಿದೆ. ದೇಶದ ಜನರ ಹಣ ಸುರಕ್ಷಿತವಾಗಿಲ್ಲ, ಬಡವರ ದುಡಿಮೆಗೆ ಬೆಲೆ ಇಲ್ಲದಂತಾಗಿದೆ. ಜೈಲಿಗೆ ಹೋಗಲು ಬಿಜೆಪಿ ಬರಬೇಕಾ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.