ಹೊರ ರಾಜ್ಯದಿಂದ ಕಾರ್ಮಿಕರು ಆಗಮಿಸಿದ್ದಕ್ಕೆ ಕೋಲಾರದಲ್ಲಿ ಪ್ರತಿಭಟನೆ

ಮಂಗಳವಾರ, 30 ಜೂನ್ 2020 (10:46 IST)
Normal 0 false false false EN-US X-NONE X-NONE

ಕೋಲಾರ : ಹೊರ ರಾಜ್ಯದಿಂದ ಕಾರ್ಮಿಕರು ಆಗಮಿಸಿದ್ದಕ್ಕೆ ಕೋಲಾರದಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೋಲಾರದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಕೋಲಾರದಲ್ಲಿ ಸೋಂಕಿತರ ಸಂಖ್ಯೆ 110ರ ಗಡಿ ದಾಟಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.

ಆದರೆ ಈ ನಡುವೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಇಂಡೋ ಆಟೋಟೆಕ್ ಲಿಮಿಟೆಡ್ ಕಂಪೆನಿ ಹೊರರಾಜ್ಯದಿಂದ ಕಾರ್ಮಿಕರನ್ನು ಯಾವುದೇ ಕೊರೊನಾ ರೂಲ್ಸ್ ನ್ನು ಫಾಲೋ ಮಾಡದೆ ಕರೆತಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಕಾರ್ಮಿಕರು ನೌಕರರನ್ನು ವಾಪಾಸ್ ಕಳುಹಿಸುವಂತೆ ಆಗ್ರಹಿಸಿ ಕಂಪೆನಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುಮಗನಿಗೆ ಕೊರೊನಾ ಸೋಂಕು ಹಿನ್ನಲೆ; ಇಂದು ನಡೆಯಬೇಕಿದ್ದ ಮದುವೆ ರದ್ದು