Publish Date: Mon, 25 Apr 2022 (21:12 IST)
Updated Date: Mon, 25 Apr 2022 (21:15 IST)
ಶವ ಸಂಸ್ಕಾರಕ್ಕೆ ಸ್ಮಶಾನ ಇಲ್ಲ ಅಂತಾ ರಾಮನಗರದಲ್ಲಿ ಪ್ರತಿಭಟನೆ ನಡೆಸಲಾಯ್ತು..ಕನ್ನಮಂಗಲ ಗ್ರಾಮಸ್ಥರು ಟ್ರಾಕ್ಟರ್ನಲ್ಲಿ ಶವವಿಟ್ಟು ಪಾರೇದೋಡ್ಡಿ ಗ್ರಾಮದ ಬಳಿ ರಸ್ತೆಗೆ ಅಡ್ಡ ಹಾಕಿ ಪ್ರೊಟೆಸ್ಟ್ ನಡೆಸಿದ್ರು.. ಗ್ರಾಮದಲ್ಲಿನ ಸ್ಮಶಾನಕ್ಕೆ ಹದ್ದು ಬಸ್ತು ಮಾಡುವ ತನಕ ಶವ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದ್ರು..ಅಲ್ಲದೇ, ತಹಶೀಲ್ದಾರ್ ಕಚೇರಿ ಬಳಿ ಶವ ತರಲು ಗ್ರಾಮಸ್ಥರು ಮುಂದಾಗಿದ್ರು.. ಇದರ ಬಗ್ಗೆ ಮಾಹಿತಿ ಪಡೆದ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.