Select Your Language

Notifications

webdunia
webdunia
webdunia
webdunia

ಶಿವರಾಜ್ ಪಾಟೀಲ್ ಗೆ ಸಚಿವ ಸ್ಥಾನ ಆಗ್ರಹಿಸಿ ಮೆರವಣಿಗೆ

shivaraj patil
bengaluru , ಶನಿವಾರ, 31 ಜುಲೈ 2021 (15:16 IST)
ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು ನಡೆದಿದ್ದು, ಶಾಸಕರು ಸಚಿವ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಇತ್ತ ರಾಯಚೂರು ಜಿಲ್ಲೆಯ ಇಬ್ಬರ ಶಾಸಕರ ಪೈಕಿ, ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ್ ಪಾಟೀಲ್ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಶಾಸಕರ ಸಾವಿರಾರು ಬೆಂಬಲಿಗರು ಬೃಹತ್ ಮೆರವಣಿಗೆ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡ ಸಾವಿರಾರು ಬೆಂಬಲಿಗರು ಶಾಸಕರ ಪರ ಘೋಷಣೆ ಕೂಗುತ್ತಾ ನಗರದ ಪ್ರಮುಖ ರಸ್ತೆಗಳ ಬೈಕ್ ರ್ಯಾಲಿ, ಮೆರವಣಿಗೆ ಮೂಲಕ ಜಿಲ್ಲಾ ಬಿಜೆಪಿ ಕಚೇರಿವರೆಗೆ ತೆರಳಿ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸುವ ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ರು.
ಹಿಂದುಳಿದ ರಾಯಚೂರು ಜಿಲ್ಲೆಗೆ ಕಳೆದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದೆ ಅನ್ಯಾಯವೆಸಲಾಗಿದೆ. ಹೀಗಾಗಿ ಈಗ ರಚನೆಯಾಗುವ ಸಚಿವ ಸಂಪುಟದಲ್ಲಿ ಎರಡು ಶಾಸಕರಾಗಿ ಆಯ್ಕೆಯಾಗಿರುವ ಡಾ.ಶಿವರಾಜ್ ಪಾಟೀಲ್ ನೀಡಬೇಕೆಂದು ಒತ್ತಾಯಿಸಿದ್ರು. ಈ ಮೂಲಕ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಹಕ್ಕೊತ್ತಾಯ ಬಲವಾಗಿ ಕೇಳಿ ಬಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

72 ಗಂಟೆ ಮುಂಚಿನ ಆರ್ ಟಿಪಿಸಿಆರ್ ವರದಿ ಕಡ್ಡಾಯ: ರಾಜ್ಯ ಸರಕಾರ ಮಾರ್ಗಸೂಚಿ ಪ್ರಕಟ