Publish Date: Thu, 27 Dec 2018 (15:08 IST)
Updated Date: Thu, 27 Dec 2018 (15:10 IST)
ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆನಿರತ ವಿಷ್ಣು ಅಭಿಮಾನಿಯೊಬ್ಬ ಅಸ್ವಸ್ಥಗೊಂಡಿದ್ದಾನೆ.
ವಿಷ್ಣು ಸೇನಾ ಸಂಘಟನೆ ರಾಜ್ಯ ಖಜಾಂಚಿ ಮಧುಸೂದನ್ ತೀವ್ರ ಅಸ್ವಸ್ಥಗೊಂಡಿದ್ದಾನೆ. ಪ್ರತಿಭಟನೆ ಮಾಡುವ ವೇಳೆ ಮಧುಸೂದನ್ ಅಸ್ವಸ್ಥನಾಗಿದ್ದಾನೆ.
ಅಸ್ವಸ್ಥಗೊಂಡ ಮಧುಸೂದನ್ ನನ್ನು ಆ್ಯಂಬುಲೆನ್ಸ್ ಮೂಲಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉದ್ಬೂರು ಗೇಟ್ ಬಳಿ ಪ್ರತಿಭಟನೆ ಮಾಡುತ್ತಿದ್ದ ವಿಷ್ಣು ಸೇನಾ ಸಂಘಟನೆ ಸದಸ್ಯರು, ವಿಷ್ಣು ಸ್ಮಾರಕ ನಿರ್ಮಾಣ ಮಾಡಬೇಕೆಂದು ಪ್ರತಿಭಟನೆಗೆ ಮುಂದಾಗಿದ್ದಾರೆ.