Publish Date: Thu, 27 Dec 2018 (14:41 IST)
Updated Date: Thu, 27 Dec 2018 (14:57 IST)
ಉಡುಪಿಯಲ್ಲಿರುವ ಶ್ರೀಕೃಷ್ಣಮಠ ಇಂದು ಜನರಿಲ್ಲದೇ ಬಿಕೋ ಎನ್ನುತ್ತಿದೆ.
ರಾಷ್ಟ್ರಪತಿ ಉಡುಪಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದೆ ಕೃಷ್ಣ ಮಠ.
ಕೃಷ್ಣ ಮಠ ಹಾಗೂ ಪೇಜಾವರ ಮಠದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಉಡುಪಿಯ ರಥಬೀದಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಮಧ್ಯಾಹ್ನ ಮೂರವರೆಗೆ ಭಕ್ತರಿಗೆ ಕೃಷ್ಣ ದರುಶನಕ್ಕೆ ಅವಕಾಶವಿಲ್ಲ. ಸರ್ಕ್ಯೂಟ್ ಹೌಸಿನಿಂದ ಕೃಷ್ಣ ಮಠದವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ರಾಷ್ಟ್ರಪತಿ ಸಂಚರಿಸುವ ರಸ್ತೆ ಅಕ್ಕಪಕ್ಕ ಅಂಗಡಿಗಳು ಮುಚ್ಚಲು ಪೊಲೀಸ್ ಆದೇಶ ತಿಳಿಸಿದೆ. ಹೊರ ಜಿಲ್ಲೆಗಳಿಂದ ಬಂದಿರುವ ಪ್ರವಾಸಿಗರು ಕೃಷ್ಣ ನ ದರುಶನವಿಲ್ಲದೇ ವಾಪಸ್ ಆಗುತ್ತಿದ್ದಾರೆ.