Publish Date: Fri, 07 Apr 2023 (13:16 IST)
Updated Date: Fri, 07 Apr 2023 (13:31 IST)
ಕನ್ನಡ ವಿರೋಧಿ ಹೇಳಿಕೆ ಹಿನ್ನೆಲೆ ಸಚಿವ ಮುನಿರತ್ನ ವಿರುದ್ದ ಕನ್ನಡಪರ ಸಂಘಟನೆಗಳ ಪ್ರತಿಭಟನೆ ನಡೆಸಿದ್ದಾರೆ.ನಗರದ ಡಾ.ರಾಜ್ ಕುಮಾರ್ ಸಮಾಧಿ ಬಳಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಮುಖಂಡರು ಪ್ರತಿಭಟನೆ ಮಾಡಿ ತಮಿಳರು ಕನ್ನಡಿಗರ ನಡುವೆ ಸಂಚು ರೂಪಿಸಿ ಮುನಿರತ್ನ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.ಈ ವೇಳೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕನ್ನಡಪರ ಹೋರಾಟಗಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.