Publish Date: Tue, 21 Feb 2023 (15:30 IST)
Updated Date: Tue, 21 Feb 2023 (15:39 IST)
ಪಿಂಚಣಿ ವಂಚಿತ ನೌಕರರಿಂದ ಫ್ರೀಡಂಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಮೂವರು ಅಸ್ವಸ್ಥರಾಗಿದ್ದಾರೆ.
ನಿವೃತ್ತ ಶಿಕ್ಷಕ ಈಶ್ವರಪ್ಪ ,ನಾಗರಾಜ್, ಹಾಗೂ ಖಜಾಂಚಿ ಲಕ್ಷ್ಮಿಪುತ್ರ ಅಸ್ವಸ್ಥರಾಗಿದ್ದು,ಅಸ್ವಸ್ಥಗೊಂಡಿರುವ ಮೂವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.138 ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದ್ದು,138 ದಿನ ಅಗಿದ್ರು ಸರ್ಕಾರದಿಂದ ರೆಸ್ಪಾನ್ಸ್ ಸಿಕ್ಕಿಲ್ಲ.ನಿವೃತ್ತ ಅನುದಾನಿತ ಶಿಕ್ಷಕರಿಂದ ಪಿಂಚಣಿಗಾಗಿ ಪಣತೊಟ್ಟಿದ್ದು, ನಿರಂತರವಾಗಿ ಧರಣಿ ಮಾಡ್ತಿದ್ದಾರೆ.