Select Your Language

Notifications

webdunia
webdunia
webdunia
webdunia

ಉದ್ಯಮಿ ಕಿರಣ್ ಮಜುಂದಾರ್ ಷಾ ವಿರುದ್ಧ ಬೀದಿಗಿಳಿದ ಕನ್ನಡ ಪರ ಸಂಘಟನೆಗಳ ಸದಸ್ಯರು

ಉದ್ಯಮಿ ಕಿರಣ್ ಮಜುಂದಾರ್ ಷಾ ವಿರುದ್ಧ  ಬೀದಿಗಿಳಿದ ಕನ್ನಡ ಪರ ಸಂಘಟನೆಗಳ ಸದಸ್ಯರು
ಆನೇಕಲ್ , ಮಂಗಳವಾರ, 10 ಜುಲೈ 2018 (15:08 IST)
ಕನ್ನಡ ಹೋರಾಟಗಾರರಿಗೆ ಶಿಕ್ಷಣ ಹಾಗೂ ಉದ್ಯೋಗದ ಬಗ್ಗೆ ಅರಿವಿಲ್ಲ ಎಂಬ ಹೇಳಿಕೆಯನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದ ಉದ್ಯಮಿ ವಿರುದ್ಧ  ಕನ್ನಡ ಜಾಗೃತಿ ವೇದಿಕೆಯ ಕಾರ್ಯಕರತರು ಪ್ರತಿಭಟನೆ ನಡೆಸಿ ಕ್ಷಮೆ ಕೇಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಾಗೋಡಿಯಲ್ಲಿರುವ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಉದ್ಯಮಿ ಕಿರಣ್ ಮಜುಂದಾರ್ ಶಾ  ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕನ್ನಡ ಹೋರಾಟಗಾರು ಹಾಗೂ ಕನ್ನಡ ಶಿಕ್ಷಣ ತಜ್ಞರನ್ನು ಕಿಡಿಗೇಡಿಗಳು ಮತ್ತು ಇವರಿಗೆ ಶಿಕ್ಷಣ ಹಾಗೂ ಉದ್ಯೋಗದ ಬಗ್ಗೆ ಅರಿವಿಲ್ಲದವರೆಂದು ಬರಹವನ್ನು ಪೋಸ್ಟ್ ಮಾಡಿದ್ದರು.
ಇಂದನ್ನು  ಖಂಡಿಸಿ  ಅವರ ಬಯೋಕಾನ್ ಸಂಸ್ಥೆಯ ಮುಂಬಾಗದಲ್ಲಿ ಕನ್ನಡ ಜಾಗೃತಿ ವೇದಿಕೆ  ಪ್ರತಿಭಟನೆ ಹಮ್ಮಿಕೊಂಡು, ಅವರ ಭಾವ ಚಿತ್ರವನ್ನು  ತುಳಿದು ಬೆಂಕಿ ಹಚ್ಚಿ  ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು, ಇನ್ನು ಈ ಕೂಡಲೇ ಕನ್ನಡ ಶಿಕ್ಷಣ ತಜ್ಞರು ಹಾಗೂ ಕನ್ನಡ ಹೋರಾಟಗಾರರಲ್ಲಿ  ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಮಜುಂದಾರ್ ಶಾಗೆ ಎಚ್ಚರಿಕೆ ನೀಡಿದರು.
ಕನ್ನಡ ನಾಡಿನಲ್ಲಿ ಹುಟ್ಟಿ ಇಲ್ಲಿನ ಅನ್ನ ತಿಂದು ಇದೀಗ ಕನ್ನಡಿಗರನ್ನೇ ಅವಮಾನಿಸುತ್ತಿರುವ ಮಜುಂದಾರ್ ಶಾರವರ ಬಯೋಕಾನ್ ಸಂಸ್ಥೆಯನ್ನು ವಿದೇಶಗಳು ಬಹಿಷ್ಕರಿಸಿದದ್ದವು. ಅಂತಹ ಕಂಪೆನಿಯನನ್ನು ಕನ್ನಡಿಗರ ಕಂಪೆನಿಯೆಂದು ಕರ್ನಾಟಕದಲ್ಲಿ ನೆಲ ಜಲ ಕೊಟ್ಟು ಕಾಪಾದಿದ್ದಕ್ಕೆ ಇದೀಗ ಕನ್ನಡಿಗರನ್ನೇ ಅವಹೇಳನ ಮಾಡುತ್ತಿದ್ದಾರೆ. ಇನ್ನು  ಬಯೋಕಾನ್ ಕಂಪನಿಯಿಂದ ಹೆಬ್ಬಗೋಡಿ ಸುತ್ತ ಮುತ್ತ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಕನ್ನಡಿಗರನ್ನು ಅವಮಾನಿಸಿರುವ ಕಿರಣ್ ಮಜುಂದಾರ್ ಶಾರವರನ್ನು ಕೂಡಲೇ ಮುಖ್ಯಮಂತ್ರಿಗಳು ರಾಜ್ಯದಿಂದ ಬಾಹಿಷ್ಕಾರ ಮಾಡಿ ಅವರ ಕಂಪನಿಗೆ ನೀಡಿರುವ ಸವಲತ್ತುಗಳನ್ನು ಹಿಂಪಡೆಯಬೇಕು ಎಂದು  ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಮಿಶ್ರ ಸರಕಾರದ ವಿರುದ್ಧ ವಿಶೇಷ ಪ್ರತಿಭಟನೆ