Select Your Language

Notifications

webdunia
webdunia
webdunia
webdunia

ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆ

ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆ
gadaga , ಶನಿವಾರ, 21 ಮೇ 2022 (20:01 IST)
ಗದಗದಲ್ಲಿ ಭಾರಿ ಮಳೆಗೆ ಶಿಗ್ಲಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದಿತ್ತು..ಇದೀಗ ಕುಸಿದು ಬಿದ್ದ ಮನೆ ಅವಶೇಷಗಳ ಅಡಿ ಸಿಲುಕಿದ್ದ ಇಬ್ಬರು ಮಕ್ಕಳು ಸೇರಿ ನಾಲ್ವರ ರಕ್ಷಣೆ ಮಾಡಲಾಗಿದೆ..ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆ ಗೋಡೆ ರಾತ್ರಿ 12 ಗಂಟೆ ಸುಮಾರಿಗೆ ಏಕಾಏಕಿ ಕುಸಿದಿದೆ..ಈ ವೇಳೆ ಗುರುಶಾಂತಯ್ಯ  ಜೋರಾಗಿ ಕೂಗಾಡಿದ್ದಾರೆ..ಅಕ್ಕ-ಪಕ್ಕದಲ್ಲಿದ್ದ ನಿವಾಸಿಗಳು ಗುರುಶಾಂತಯ್ಯ ಕೂಗಾಟ, ಕಿರುಚಾಟ ಕೇಳಿ 
ಕೂಡಲೇ ಬಂದು ಅವಶೇಷಗಳಡಿ ಸಿಲುಕಿದ್ದ ಗುರುಶಾಂತಯ್ಯ, ಪತ್ನಿ ಶೈಲಾ, ಮಕ್ಕಳಾದ ಅಜಯ್, ಸೃಷ್ಟಿಯನ್ನ ರಕ್ಷಿಸಿದ್ದಾರೆ..ಇನ್ನು, ಅವಘಡದಲ್ಲಿ ಗಾಯಗೊಂಡ ಗುರುಶಾಂತಯ್ಯಗೆ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ..ಶಿಗ್ಲಿ ಗ್ರಾಮಕ್ಕೆ ಎಸಿ ಅನ್ನಪೂರ್ಣಾ &  ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಬಳ್ಳಾಪುರದಲ್ಲಿ ಹೊತ್ತಿ ಉರಿದ ಆಲ್ಟೋ ಕಾರ್